ಹಾವೇರಿ : ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಟವಾಗಿದೆ. ದೊಡ್ಡ ಚರಿತ್ರೆ ಇರುವ ಸಂಸ್ಕ್ರತಿ ಅಂದರೆ ಅದು ಕನ್ನಡದ ಸಂಸ್ಕ್ರತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕನ್ನಡ ಸಂಸ್ಕ್ರತಿ ಉಳಿಸಿಕೊಂಡು ಹೋಗುವಜವಾಬ್ದಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲಿದೆ. ಕನ್ನಡವನ್ನು ಭಾರತ ದೇಶದಲ್ಲಿ ಆಳವಾಗಿ ಬಿತ್ತರಿಸಬೇಕು. ಕನ್ನಡ ಇಡೀ ಜಗತ್ತಿನಲ್ಲಿ ಅಂತ್ಯಂತ ಪ್ರಾಚೀನವಾದ ಭಾಷೆ, ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಟವಾಗಿದೆ. ದೊಡ್ಡ ಚರಿತ್ರೆ ಇರುವ ಸಂಸ್ಕ್ರತಿ ಅಂದರೆ ಅದು ಕನ್ನಡದ ಸಂಸ್ಕ್ರತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕನ್ನಡಕ್ಕಾಗಿ ಕೆಲಸ ಮಾಡುವ ಸಮಯ ಇದು. ಭಾಷೆ, ಸಂಸ್ಕೃತಿ ಬೆಳೆಯಲು ನಡೆದು ಬಂದು ದಾರಿ ಸಿಂಹಾವಲೋಕನ ಮಾಡಿಕೊಳ್ಳಬೇಕು. ಹಾವೇರಿ ಸಾಹಿತಿಗಳ ನಾಡು, ಈ ನೆಲದ ಅಸ್ಮಿತೆ ಎತ್ತಿ ಹಿಡಿಯುತ್ತಿದೆ. ಕನ್ನಡ ,ಕನ್ನಡ ಸಾಹಿತ್ಯ, ರಚನೆ ಬಹಳ ಮುಖ್ಯ ಎಂದಿದ್ದಾರೆ.ಕನ್ನಡದ ಮಸೂದೆ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು.ಈ , ಹಿಂದೆಯೂ ಇಂತಹ ಪರ್ಯಾಯ ಸಮ್ಮೇಳನ ಬಹಳಷ್ಟು ನಡೆದಿದೆ. ಅಲ್ಲಿ ಚರ್ಚೆ ಆಗುವ ವಿಷಯಗಳನ್ನ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದರು.ಕನ್ನಡ ಅತ್ಯಂತ ಸಿರಿವಂತ ಭಾಷೆ, ಕನ್ನಡ ಭಾಷೆ ಯಾವುದರಲ್ಲಿಯೂ ಬಡವಾಗಿಲ್ಲ. ಸೂರ್ಯ-ಚಂದ್ರು ಇರೋವರೆಗೂ ಕನ್ನಡ ಬೆಳೆಯುತ್ತದೆ. ಕನ್ನಡಕ್ಕೆ ಆಪತ್ತು ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ, ಕನ್ನಡಕ್ಕೆ ಆಪತ್ತು ತರುವ ಭಾವನೆ ಜಗತ್ತಿನಲ್ಲಿ ಹುಟ್ಟಿಲ್ಲ ಮತ್ತು ಹುಟ್ಟುವುದೂ ಇಲ್ಲ, ಅಧ್ಯಕ್ಷರಾದ ಮಹೇಶ ಜೋಶಿ ಕನ್ನಡಕ್ಕೆ ಹೊಸ ಚೈತನ್ಯ ತುಂಬುತ್ತಿದ್ದಾರೆ ಎಂದರು.
BIGG NEWS : ಬಿಜೆಪಿ ಸೇರ್ಪಡೆ ಗುಟ್ಟು ಬಿಚ್ಚಿಟ್ಟ ಸಂಸದೆ ಸುಮಲತಾ |Sumalatha