ಬೆಂಗಳೂರು: ಗಾಯಕ, ವಕೀಲ ಶಿವಮೊಗ್ಗ ಸುಬ್ಬಣ್ಣ( 84) ಜಯದೇವ ಆಸ್ಪತ್ರೆಯಲ್ಲಿ ಹೃದಯ ಸ್ಥಂಬನದಿಂದ ನಿಧನರಾಗಿದ್ದಾರೆ.
ಗಾಯಕ ಶಿವಮೊಗ್ಗ ಸುಬ್ಬಣ್ಣರಿಗೆ 83 ವರ್ಷ ವಯಸ್ಸಾಗಿತ್ತು. ನಿನ್ನೆ ಸಂಜೆ ಹೃದಯಾಘಾತದಿಂದ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆರಾ ತ್ರಿ 10.30 ರ ಸುಮಾರಿಗೆ ಕಾರ್ಡಿಯಾಕ್ ಅರೆಸ್ಟ್ನಿಂದ ನಿಧರಾಗಿದ್ದಾರೆ.
ಶಿವಮೊಗ್ಗ ಸುಬ್ಬಣ್ಣರಿಗೆ ಭಾಗ್ಯಶ್ರಿ, ಶ್ರೀರಂಗ ಇಬ್ಬರು ಮಕ್ಕಳು.
ಕಾಡು ಕುದುರೆ ಸಿನಿಮಾದ ಕಾಡು ಕುದುರೆ ಓಡಿಬಂದಿತ್ತಾ ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನು ಗಾಯಕ ಶಿವಮೊಗ್ಗ ಸುಬ್ಬಣ್ಣ ಪಡೆದಿದ್ದರು.
ರಜತ ಕಮಲ , ಶಿಶುನಾಳ ಷರೀಫ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು..
ನೋಟರಿ ಪಬ್ಲಕ್ ಅಲ್ಲಿಯೂ ಅಪಾರ ಸೇವೆಯನ್ನು ಶಿವಮೊಗ್ಗ ಸುಬ್ಬಣ್ಣ ಸಲ್ಲಿಸಿದ್ದರು.
ಗಾಯಕರಾಗಿ ಜೊತೆಗೆ ವಕೀಲರಾಗಿಯೂ ಸೇವೆ ಸಲ್ಲಿಸಿದ್ರು. ಇಂತಹ ಕನ್ನಡದ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲವಾಗಿದ್ದಾರೆ.