ಹಾವೇರಿ : ಹಾವೇರಿ ನಗರದಲ್ಲಿ ಜನವರಿ 06, 07, ಮತ್ತು 08 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ದತೆ ನಡೆಸಲಾಗಿದೆ.
ಇದೀಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಸೇರಿ ಅತಿಥಿಗಳಿಗೆ ಭಾಷಣ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಸಮಯ ನಿಗದಿಗೊಳಿಸಿದೆ. ಸಿಎಂ ಬೊಮ್ಮಾಯಿ ಸೇರಿ ಎಲ್ಲಾ ಅತಿಥಿಗಳಿಗೂ ಈ ನಿಯಮ ಅನ್ವಯವಾಗಲಿದೆ.
ಉದ್ಘಾಟನಾ ಭಾಷಣ ಮಾಡಲು ಮುಖ್ಯಮಂತ್ರಿಗಳಿಗೆ 30 ನಿಮಿಷ ಸಮಯ ನಿಗದಿ, ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರ ಭಾಷಣಕ್ಕೆ 45 ನಿಮಿಷ ನಿಗದಿ, ಬಿಎಸ್ವೈ, ಹೆಚ್ಡಿಕೆ ಸೇರಿ ಗಣ್ಯರಿಗೆ 10 ನಿಮಿಷ ಸಮಯ ನಿಗದಿ ಮಾಡಲಾಗಿದೆ. ಈ ಸಮಯದೊಳಗೆ ಭಾಷಣ ಮಾಡಿ ಮುಗಿಸಬೇಕೆಂಬ ನಿಯಮವನ್ನು ಕನ್ನಡ ಸಾಹಿತ್ಯ ಪರಿಷತ್ ತಂದಿದೆ.
ಸಮ್ಮೇಳನ ನಡೆಯುವ ಹಿನ್ನೆಲೆ ಹಾವೇರಿ ಜಿಲ್ಲೆಯಾದ್ಯಂತ ಎಲ್ಲಾ ಪಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.ಹಾವೇರಿ ಜಿಲ್ಲೆಯಾದ್ಯಂತ ಎಲ್ಲಾ ಪಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ದಿನಾಂಕ: 06-01-2023 ಮತ್ತು 7-01-2023 ರಂದು ರಜೆ ಘೋಷಿಸಲು ಆದೇಶಿಸಲಾಗಿರುತ್ತದೆ. ಸದರಿ ಆದೇಶದನ್ವಯ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 06-01-2023 ಮತ್ತು 07-01-2023 ರಂದು ರಜೆ ಘೋಷಿಸಿ ಆದೇಶಿಸಲಾಗಿದೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೆ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ವಸತಿ ಸೌಕರ್ಯಕ್ಕೆ ಆಯ್ಕೆ ಮಾಡಲಾಗಿದ್ದು, ಸದರಿ ಪಟ್ಟಿಯಲ್ಲಿರುವ ಶಾಲೆಗಳಿಗೆ ದಿನಾಂಕ: 04-01-2013 ರಿಂದ 05-01-2023ರ ವರೆಗೆ ಹೆಚ್ಚುವರಿಯಾಗಿ 12 ದಿನ ರಜೆ ಘೋಷಿಸಿದೆ. ಜಿಲ್ಲೆಯಲ್ಲಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಸೂಚಿಸಿದೆ.
ನಾಲ್ಕು ನಗರಗಳಲ್ಲಿ ರಿಂಗ್ ರಸ್ತೆ, ಇದೇ ವರ್ಷ ಕಾಮಗಾರಿ ಆರಂಭ : ಸಿಎಂ ಬೊಮ್ಮಾಯಿ
BREAKING NEWS : ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ವಿಕಲಚೇತನ ವ್ಯಕ್ತಿ ಬಲಿ