ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಮೂರು ವರ್ಷಗಳ ಬಳಿಕ ಅದ್ಧೂರಿ ಕನ್ನಡ ರಾಜ್ಯೋತ್ಸವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಬರುವವರಿಗೆಲ್ಲಾ ಹೋಳಿಗೆ ಊಟ ಹಾಕಿಸಲು ನಿರ್ಧರಿಸಲಾಗಿದೆ.
ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗುವ 50 ಸಾವಿರ ಜನರಿಗೆ ಹುಕ್ಕೇರಿ ಹಿರೇಮಠ ವತಿಯಿಂದ 1 ಲಕ್ಷ ಹೋಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಈ ಬಾರಿ ಅದ್ದೂರಿಯಾಗಿ ರಾಜ್ಯೋತ್ಸವ ನಡೆಸಲು ತೀರ್ಮಾನಿಸಿದ್ದೇವೆ, ಒಬ್ಬರಿಗೆ ಎರಡು ಹೋಳಿಗೆ ಪ್ರಕಾರ ಒಂದು ಲಕ್ಷ ಹೋಳಿಗೆ ಮಾಡಿಸಲು ತೀರ್ಮಾನ ಮಾಡಿದ್ದೇವೆ, ಇದಕ್ಕಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯ 200 ಬಾಣಸಿಗರು ಬರಲಿದ್ದು, 150 ಜನ ಹೆಣ್ಣುಮಕ್ಕಳಿಂದ ಹೋಳಿಗೆ, 50 ಪುರುಷರಿಂದ ಕಾಯಿ ಪಲ್ಯ, ಅನ್ನ ಸಾಂಬಾರ್ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಇನ್ನೂ, ಹೋಳಿಗೆ ದಾಸೋಹಕ್ಕೆ ನಟ ಸಾಯಿ ಕುಮಾರ್ ಹಾಗೂ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಲಿದ್ದಾರೆ. ಹಾಗಾಗಿ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯೋತ್ಸವಕ್ಕೆ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.
UPDATE : ಗುಜರಾತ್’ನಲ್ಲಿ ‘ಕೇಬಲ್ ಬ್ರಿಡ್ಜ್’ ಕುಸಿದು 7 ಮಂದಿ ಸಾವು, 400ಕ್ಕೂ ಹೆಚ್ಚು ಮಂದಿ ನದಿ ಪಾಲು
ಬಿಜೆಪಿ ಸರ್ಕಾರ ದುಡ್ಡನ್ನು ಕೈಯಲ್ಲಿ ಅಲ್ಲ, ‘JCB’ ಯಲ್ಲಿ ಬಾಚುತ್ತಿದೆ : H.D ಕುಮಾರಸ್ವಾಮಿ ವಾಗ್ಧಾಳಿ
ತಿರುಪತಿಗೆ ಬರುವ ಭಕ್ತರಿಗೆ ಮುಖ್ಯ ಮಾಹಿತಿ : ನವೆಂಬರ್ ನಿಂದ ತಿಮ್ಮಪ್ಪನ ‘ವಿಐಪಿ’ ದರ್ಶನ ಸಮಯದಲ್ಲಿ ಬದಲಾವಣೆ