ಬೆಂಗಳೂರು: ನವೆಂಬರ್.1ರಿಂದ ಕರ್ನಾಟಕದಲ್ಲಿ ಕನ್ನಡದ ಕಲರವ ಆರಂಭಗೊಳ್ಳಲಿದೆ. ಕನ್ನಡ ರಾಜ್ಯೋತ್ಸವವನ್ನು ನಂವೆಂಬರ್ ಇಡೀ ತಿಂಗಳು ಆಚರಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.10ರಂದು ದುಬಾಯಿ ಕರ್ನಾಟಕ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ನಡೆಸಲಿದ್ದು, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಮುಖ್ಯ ಅತಿಥಿಯಾಗಿ ಭಾಗಿಯಾಗಲು ವಿಶೇಷ ಆಹ್ವಾನ ನೀಡಲಾಗಿದೆ.
ಈ ಸಂಬಂಧ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಆಹ್ವಾನ ನೀಡಿರುವಂತ ದುಬಾಯಿ ಕರ್ನಾಟಕ ಸಂಘವು, ನಮ್ಮ ಸಂಘವನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಅನಿವಾಸಿ ಕನ್ನಡಿಗರ ಕಾಳಜಿಗಾಗಿ 39 ವರ್ಷಗಳಿಂದ ಶ್ರಮಿಸುತ್ತಾ ಬಂದಿದೆ. ನಮ್ಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ತಿಳಿಸಿದೆ.
ಪ್ರಸ್ತುತ ವರ್ಷದ 69ನೇ ಕರ್ನಾಟಕ ರಾಜ್ಯೋತ್ಸವ-2024 ಅನ್ನು ನವೆಂಬರ್.10, 2024ರಂದು ದುಬೈನಲ್ಲಿ ಆಚರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ತಾವು ಮುಖ್ಯ ಅತಿಥಿಯಾಗಿ ಆಗಮಿಸಬೇಕು ಎಂಬುದಾಗಿ ಆಹ್ವಾನಿವನ್ನು ನೀಡಿದೆ.
ನವೆಂಬರ್.10ರಂದು ದುಬೈನ್ ಇಂಡಿಯನ್ ಅಕಾಡೆಮಿ ಆಫ್ ಕುಸೇಸ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು 2000 ಪ್ರೇಕ್ಷಕರು ಈ ಕರ್ನಾಟಕ ದುಬೈ ಕನ್ನಡಿಗರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಖ್ಯಾತ ಗಿಟಾರ್ ವಾದಕ ರಾಜಗೋಪಾಲ್ ಅವರ ಸಂಗೀತ ಸಂಯೋಜನೆಯ ಝೀ ಸರಿಗಮ ಖ್ಯಾತಿಯ ದ್ವಾಪರ ಗಾಯಕ ಜಸ್ಕರನ್ ಸಿಂಗ್, ಹಿನ್ನೆಲೆ ಗಾಯಕಿ ಅನನ್ಯ ಪ್ರಕಾಶ್ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಶೇಷ ಗಾಯಕರಾಗಿ ದುಬೈನ ಸುಪ್ರಸಿದ್ದ ಗಾಯಕ ಹರೀಶ್ ಶೇರಿಗಾರ್ ಮತ್ತು ಅಕ್ಷತಾ ರಾವ್ ಕೂಡ ಭಾಗಿಯಾಗಲಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಸಾರ್ವಜನಿಕರ ಗಮನಕ್ಕೆ: ಉಪ ಚುನಾವಣೆಯಲ್ಲಿ ಅಕ್ರಮ ಕಂಡು ಬಂದ್ರೇ, ಜಸ್ಟ್ ಹೀಗೆ ದೂರು ಸಲ್ಲಿಸಿ
BREAKING: ಜೆಇಇ ಮೇನ್ 2025ರ ಪರೀಕ್ಷೆಗೆ ದಿನಾಂಕ ಪ್ರಕಟ: ಇಲ್ಲಿದೆ ಡೀಟೆಲ್ಸ್ | JEE Main 2025 exam
BREAKING : ‘ಮುಡಾ’ ಹಗರಣ : ಬಿಲ್ಡರ್ ಮಂಜುನಾಥ್ ವಿರುದ್ಧ ‘ED’ ಗೆ ಮತ್ತೊಂದು ದೂರು ಸಲ್ಲಿಕೆ!