ಬೆಂಗಳೂರು : 2006 ರಲ್ಲಿ ಗುರು ಪ್ರಸಾದ್ ನಿರ್ದೇಶನ ‘ಮಠ’ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡಿತ್ತು, ಇದೀಗ ಅದೇ ಹೆಸರಿನಲ್ಲಿ 16 ವರ್ಷಗಳ ನಂತರ ಹೊಸ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಪೋಸ್ಟರ್ ಹಾಗೂ ಟ್ರೇಲರ್ ಗಳಿಂದ ಗಮನ ಸೆಳೆದ ಮಠ ಸಿನಿಮಾ ಹೊಸ ವಿವಾದದಲ್ಲಿ ಸಿಲುಕಿದೆ.
ರವೀಂದ್ರ ವಂಶಿ ನಿರ್ಮಾಣದ ಈ ಸಿನಿಮಾದಲ್ಲಿ ಮಠದ ಸ್ವಾಮೀಜಿ ಹಾಗೂ ಮಠಗಳಿಗೆ ಅವಮಾನ ಮಾಡಲಾಗಿದೆ ಎಂದು ಕಾಳಿಕಾ ಮಠದ ಖುಷಿ ಕುಮಾರ ಸ್ವಾಮೀಜಿ ಕರ್ನಾಟಕ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಸಿನಿಮಾದ ಟ್ರೇಲರ್ ನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಸಂಭಾಷಣೆಯಿದ್ದು, ಹಿಂದೂ ಧರ್ಮ, ಮಠದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದಿದ್ದಾರೆ.
ಈ ಕೂಡಲೇ ಚಿತ್ರದ ಬಿಡುಗಡೆಯನ್ನು ತಡೆಯಬೇಕು, ಚಿತ್ರತಂಡದವರು ಸ್ಪಷ್ಟೀಕರಣ ನೀಡುವವವರೆಗೆ ಸಿನಿಮಾ ಬಿಡುಗಡೆಗೆ ತಡೆ ಹಿಡಿಯಬೇಕು ಎಂದು ಖುಷಿ ಕುಮಾರ ಸ್ವಾಮೀಜಿ ಮನವಿ ಮಾಡಿದ್ದಾರೆ.ಅಂದಹಾಗೆ ಈ ಸಿನಿಮಾ ನ.18 ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಸಂತೋಷ್ ದಾವಣಗೆರೆ ನಾಯಕಟ ನಟನಾಗಿ ನಟಿಸಿದ್ದು, ಸಾಧುಕೋಕಿಲ, ರಮೇಶ್ ಭಟ್, ತಬಲ ನಾಣಿ ಮತ್ತಿತರರು ತೆರೆ ಹಂಚಿಕೊಂಡಿದ್ದಾರೆ.
BIG NEWS: ಕಲ್ಯಾಣ ಕರ್ನಾಟಕ ಭಾಗದಲ್ಲಿ 2 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ – ಸಿಎಂ ಬೊಮ್ಮಾಯಿ ಘೋಷಣೆ