ತೆಲಂಗಾಣ: ಈಗಾಗಲೇ ದೇಶದಲ್ಲಿ ನಾಲ್ವರಿಗೆ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಈ ಬೆನ್ನಲ್ಲೇ ತೆಲಂಗಾಮದಲ್ಲಿ ಇಂದು ಮತ್ತೊಂದು ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಮಂಕಿಪಾಕ್ಸ್ ಬಗ್ಗೆ ಮತ್ತಷ್ಟು ಆತಂಕ ಉಂಟು ಮಾಡಿದೆ.
ಈ ಬಗ್ಗೆ ತೆಲಂಗಾಣ ಸಾರ್ವಜನಿಕ ಆರೋಗ್ಯ ನಿರ್ದೇಶಕರು ಮಾಹಿತಿ ನೀಡಿದ್ದು, ಕುವೈಟ್ ಗೆ ಪ್ರಯಾಣದ ಇತಿಹಾಸ ಹೊಂದಿರುವ ಕಾಮರೆಡ್ಡಿಯ 40 ವರ್ಷದ ನಿವಾಸಿಯು ಮಂಕಿಪಾಕ್ಸ್ ನ ರೋಗಲಕ್ಷಣಗಳನ್ನು ತೋರಿಸಿದ್ದಾರೆ. ರೋಗಿಯನ್ನು ಹೈದರಾಬಾದ್ನ ಫೀವರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಅವರ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಯ ಎನ್ಐವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ತಿಳಿಸಿದ್ದಾರೆ.
A 40-year-old resident of Kamareddy with a travel history to Kuwait has shown symptoms of Monkeypox. The patient is being shifted to Fever Hospital in Hyderabad. His samples have been sent to NIV lab, Pune for testing. He has been isolated: Director of Public Health, Telangana
— ANI (@ANI) July 24, 2022
ಈ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಆರು ಜನರನ್ನು ನಾವು ಗುರುತಿಸಿದ್ದೇವೆ. ಅವರಲ್ಲಿ ಯಾರಿಗೂ ಯಾವುದೇ ರೋಗಲಕ್ಷಣಗಳು ಇರಲಿಲ್ಲ. ಆದಾಗ್ಯೂ, ನಾವು ಅವರನ್ನು ಪ್ರತ್ಯೇಕಿಸಿದ್ದೇವೆ ಎಂದು ಹೇಳಿದ್ದಾರೆ.
We have identified six people who had direct contact with this person. None of them had any symptoms. However, we isolated them: Director of Public Health, Telangana
— ANI (@ANI) July 24, 2022