ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ದೇವಾಲಯದ ಆಕಾರದ ಕೇಕ್ ಕತ್ತರಿಸುವ ವೀಡಿಯೊ ವೈರಲ್ ಆದ ನಂತರ ವಿವಾದ ಹುಟ್ಟುಕೊಂಢಿದೆ. ಈ ನಡುವೆ ಇದು ಹಿಂದೂಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ. ಕಮಲ್ ನಾಥ್ ಅವರು ದೇವಾಲಯದ ಆಕಾರದ ಕೇಕ್ ಅನ್ನು ಕತ್ತರಿಸುವುದನ್ನು ವೀಡಿಯೊವೊಂದು ಕಂಡು ಬಂದಿದೆ.ಅದರಲ್ಲಿ ಕೇಸರಿ ಧ್ವಜ ಮತ್ತು ಮೇಲೆ ಹನುಮಂತನ ಚಿತ್ರವಿದೆ.
ಮಂಗಳವಾರ ಸಂಜೆ ಚಿಂದ್ವಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಅವರ ಮನೆಯಲ್ಲಿ ಈ ಆಚರಣೆ ನಡೆಯಿತು. ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆಗುತ್ತಿದ್ದಂತೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಮಲ್ ನಾಥ್ ಅವರು ಹಲವಾರು ಧಾರ್ಮಿಕ ಚಿಹ್ನೆಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಭಾವನೆಗಳನ್ನು ನೋಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ಅವರು (ಕಮಲ್ ನಾಥ್) ಮತ್ತು ಅವರ ಪಕ್ಷವು ಸುಳ್ಳು ಭಕ್ತರಿಂದ ಕೂಡಿದ್ದು, ಅವರಿಗೆ ದೇವರೊಂದಿಗೆ ಯಾವುದೇ ಸಂಬಂಧವಿಲ್ಲ. ಒಂದು ಕಾಲದಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ ಅದೇ ಪಕ್ಷವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಆದರೆ ಇದು ಚುನಾವಣೆಯಲ್ಲಿ ಅವರಿಗೆ ಹಾನಿಯುಂಟುಮಾಡುತ್ತಿದೆ ಎಂದು ಅರಿತುಕೊಂಡ ನಂತರ, ಅವರು ಹನುಮಾನ್ ಭಕ್ತರಾದರು” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
कांग्रेसियों का भगवान की भक्ति से कोई लेना-देना ही नहीं है, यह बगुला भगत हैं। इनकी पार्टी कभी श्रीराम मंदिर का विरोध करती थी।
आप केक पर बना हनुमान जी रहे हैं और फिर केक काट भी रहे हैं। यह सनातन परंपरा और हिंदू धर्म का अपमान है, जिसको यह समाज स्वीकार नहीं करेगा। pic.twitter.com/iN97G9CbtM
— Shivraj Singh Chouhan (@ChouhanShivraj) November 16, 2022