ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ 07 ಜಿಲ್ಲೆಗಳಲ್ಲೂ ಸಿರಿಧಾನ್ಯ ಬೆಳೆಗಳು ರಾರಾಜಿಸಬೇಕು. ಈ ದಿಸೆಯಲ್ಲಿ ರಾಯಚೂರು ಜಿಲ್ಲೆಯನ್ನು ಸಿರಿಧಾನ್ಯ ಜಿಲ್ಲೆಯಾಗಿ ಘೋಷಿಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಸಂಶೋಧನೆಗಳು ನಡೆಯಲು ರಾಯಚೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ನಬಾರ್ಡ್ ಮೂಲಕ 25 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇವರ ಸಹಯೋಗದಲ್ಲಿ ವಿವಿ ಆವರಣದ ಪ್ರೇಕ್ಷಾಗೃಹದಲ್ಲಿ ಶನಿವಾರ ಏರ್ಪಡಿಸಲಾದ ಸಿರಿಧಾನ್ಯ ಸಮಾವೇಶ-2022 ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತ ದೇಶವು ಸಿರಿಧಾನ್ಯಗಳ ಮೂಲಕ ಇಡೀ ವಿಶ್ವದ ಗಮನ ಸೆಳೆಯುವ ಕಾರ್ಯ ಮಾಡಲು ಆರಂಭಿಸಿದೆ. ದೇಶದಲ್ಲಿ ಕರ್ನಾಟಕ ರಾಜ್ಯವು ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ. ಸಹಾಯಧನ ಹಾಗೂ ಸಿರಿಧಾನ ಸಂಸ್ಕರಣೆ ಘಟಕಗಳಿಗೆ ಗರಿಷ್ಟ 10 ಲಕ್ಷ ರೂ. ಗಳ ವರೆಗೂ ಪ್ರೋತ್ಸಾಹಧನ ನೀಡುವ ಮೂಲಕ ಸಿರಿಧಾನ್ಯ ಅಭಿಯಾನಕ್ಕೆ ಪ್ರಮುಖ ಕೊಡುಗೆ ನೀಡುತ್ತಿದೆ. ಅತಿ ಹೆಚ್ಚು ನಾರಿನಾಂಶ, ಕಡಿಮೆ ಸಕ್ಕರೆ ಪ್ರಮಾಣ, ಉತ್ತಮ ಜೀರ್ಣದಾಯಕ ಹಾಗೂ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿರುವ ಸಿರಿಧಾನ್ಯಗಳ ಬಳಕೆಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಜಗತ್ತಿನಲ್ಲಿ ಸಂಭವಿಸಿರುವ ಹಲವು ಯುದ್ಧಗಳು ಆಹಾರ ಭದ್ರತಯ ಮಹತ್ವವನ್ನು ನಮಗೆ ಕಲಿಸಿಕೊಟ್ಟಿವೆ. ಸಿರಿಧಾನ್ಯಗಳ ಉತ್ಪಾದನೆ, ಧಾನ್ಯಗಳ ಸಂಸ್ಕರಣೆ, ವೈಜ್ಞಾನಿಕ ಸಂಗ್ರಹಣೆ, ಪ್ರಮಾಣೀಕರಣ, ಪ್ಯಾಕೇಜಿಂಗ್, ಬ್ರಾö್ಯಂಡಿAಗ್ ಜೊತೆಗೆ ಸಿರಿಧಾನ್ಯದ ಮೌಲ್ಯವರ್ಧನೆ ಮಾಡುವುದು ಅತಿಮುಖ್ಯವಾಗಿದ್ದು, ಇದರಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬಹುದಾಗಿದೆ. ಆಹಾರ ಸಂಸ್ಕರಣೆ ಸ್ಟಾರ್ಟಪ್ ಘಟಕಗಳಿಗೆ 05 ವರ್ಷಗಳ ಕಾಲ ತೆರಿಗೆ ರಿಯಾಯಿತಿ ನೀಡಲಾಗುತ್ತಿದೆ. 2018 ರಲ್ಲಿ ಭಾರತದಲ್ಲಿ ಸಿರಿಧಾನ್ಯಗಳ ವರ್ಷವೆಂದು ಘೋಷಣೆಯಾದ ಬಳಿಕ, ಪ್ರಧಾನಮಂತ್ರಿಗಳಾದ ನರೇಂದ್ರ ಮೋದೀಜಿಯವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ಸಿರಿಧಾನ್ಯಗಳ ಮಹತ್ವದ ಬಗ್ಗೆ ಯೋಗದ ಮಾದರಿಯಲ್ಲಿ ಇಡೀ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಒಂದು ಜಿಲ್ಲೆ- ಒಂದು ಬೆಳೆ ಯೋಜನೆಗೆ ಪೂರಕವಾಗಿ ಕಲ್ಯಾಣ ಕರ್ನಾಟಕವು ಸಿರಿಧಾನ್ಯದ ಹಬ್ ಆಗಬೇಕು. ಕಾಫಿ ಎಂದು ಹೇಳಿದಾಗ ಹೇಗೆ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ನೆನೆಯುತ್ತೇವೆಯೋ, ಅದೇ ರೀತಿ ಸಿರಿಧಾನ್ಯಕ್ಕೆ ಕಲ್ಯಾಣ ಕರ್ನಾಟಕವನ್ನು ಜನರು ನೆನೆಪಿಸಿಕೊಳ್ಳುವಂತಾಗಬೇಕು. ದೊಡ್ಡ ದೊಡ್ಡ ಕಂಪನಿಗಳು ಕಲ್ಯಾಣ ಕರ್ನಾಟಕದಲ್ಲಿ ಸಿರಿಧಾನ್ಯದ ಸಂಸ್ಕರಣೆ ಹಾಗೂ ಅಭಿವೃದ್ಧಿಗೆ ಸಂಬAಧಿಸಿದAತೆ ತೊಡಗಿಸಿಕೊಳ್ಳುವಂತೆ ನಾವು ಆಹ್ವಾನಿಸುತ್ತೇವೆ, ಅವರಿಗೆ ಬೇಕಾದ ಅಗತ್ಯ ನೆರವು ಒದಗಿಸಲು ಸರ್ಕಾರ ಸಿದ್ಧವಾಗಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸಿರಿಧಾನ್ಯಗಳಿಗೆ ಸಂಬAಧಿಸಿದAತೆ ಸಂಶೋಧನೆ, ಪ್ರಯೋಗ, ಸಂಸ್ಕರಣೆಗೆ ಸಂಬAಧಿತ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ನಬಾರ್ಡ್ ಯೋಜನೆ ಮೂಲಕ 25 ಕೋಟಿ ರೂ. ಗಳ ಅನುದಾನ ಒದಗಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಘೋಷಿಸಿದರು.
ಸಿರಿಧಾನ್ಯಗಳಿಗೆ ಸಂಬAಧಿತ ಸಂಶೋಧನೆ, ಹೊಸ ಆವಿಷ್ಕಾರ, ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಅಭಿವೃದ್ಧಿಪರ ಸ್ಟಾರ್ಟ್ಪ್ಗಳಿಗೆ ರಾಷ್ಟç ಮಟ್ಟದ ಸ್ಪರ್ಧೆಯನ್ನು ನೀತಿ ಆಯೋಗವು ಇನ್ನೊಂದು ವಾರದೊಳಗೆ ಘೋಷಿಸಲಿದ್ದು, ಇದರಲ್ಲಿ ವಿಜೇತರಾಗುವ 03 ಸ್ಟಾರ್ಟ್ಪ್ಗಳಿಗೆ ತಲಾ 01 ಕೋಟಿ ರೂ. ಬಹುಮಾನ ನೀಡಲಾಗುವುದು. ಅದೇ ರೀತಿ ಉತ್ತಮವೆಂದು ಆಯ್ಕೆಯಾಗುವ 15 ಜನರಿಗೆ ತಲಾ 20 ಲಕ್ಷ ರೂ. 15 ಜನರಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗುವುದು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಕೃಷಿ ಸಂಶೋಧಕರು ಈ ಸ್ಪರ್ಧೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ಡಿಸೆಂಬರ್ ತಿಂಗಳಲ್ಲಿ ವಿಜೇತರ ಘೋಷಣೆ ಮಾಡಲಾಗುವುದು. ಬರುವ 2023 ರಲ್ಲಿ ವಿಶ್ವ ಮಟ್ಟದಲ್ಲಿ ಸಿರಿಧಾನ್ಯಕ್ಕೆ ಸಂಬAಧಿಸಿದAತೆ ದೊಡ್ಡ ಪ್ರಮಾಣದಲ್ಲಿ ಚಟುವಟಿಕೆಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದರು.
ಮುಖ್ಯಮAತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ್ ಮುನೇನಕೊಪ್ಪ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಶಿವನಗೌಡ ನಾಯಕ, ರಾಯಚೂರು ನಗರ ಕ್ಷೇತ್ರದ ಶಾಸಕ ಡಾ. ಎಸ್.ಶಿವರಾಜ್ ಪಾಟೀಲ್., ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ನಮೋಶಿ, ಚಂದ್ರಶೇಖರ ಪಾಟೀಲ್, ಶರಣಗೌಡ ಪಾಟೀಲ್ ಬಯ್ಯಾಪುರ, ಹಟ್ಟಿ ಚಿನ್ನದ ಗಣಿ ನಿಗಮ ನಿಯಮಿತದ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ್, ರಾಯಚೂರು ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಳ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಕೆ.ಎನ್. ಕಟ್ಟಿಮನಿ ಹಾಗೂ ವ್ಯವಸ್ಥಾಪನಾ ಸದಸ್ಯರಗಳಾದ ಕೊಟ್ರೇಶಪ್ಪ ಬಿ. ಕೋರಿ, ತ್ರಿವಿಕ್ರಮ್ ಜೋಶಿ, ಮಹಾಂತೇಶ್ ಗೌಡ ಬಿ. ಪಾಟೀಲ್, ಜಿ.ಶ್ರೀಧರ್ ಕೆಸರಟ್ಟಿ, ಸುನಿಲ್ ಕುಮಾರ್ ವರ್ಮ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.