ಕಲಬುರಗಿ: : ಕಲಬುರಗಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಎಳೆದೊಯ್ದು ಅತ್ಯಾಚಾರ, ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಅಪ್ರಾಪ್ತ ಬಾಲಕನನ್ನು ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಬಂಧಿತ 16 ವರ್ಷದ ಬಾಲಕನಾಗಿದ್ದು, ಐಟಿಐ ವಿದ್ಯಾರ್ಥಿಯಾಗಿದ್ದನು. ಬಂಧಿತ ಆರೋಪಿ ಯಾರೊಟ್ಟಿಗೂ ಊರಿನಲ್ಲಿ ಬೆರೆಯದೇ ಸದಾ ಒಂಟಿಯಾಗಿರುತ್ತಿದ್ದನು ಎನ್ನಲಾಗಿದೆ. ಅಲ್ಲದೇ ಯಾವಾಗಲೂ ಆರೋಪಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದನು. ಇದರಿಂದ ಪ್ರಚೋದನೆಗೆ ಒಳಗಾಗಿ ಈ ಕೃತ್ಯ ಎಸಗಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕಲಬುರಗಿಯಲ್ಲಿ ಎಸ್ ಪಿ ಇಶಾ ಪಂತ್ ಮಾಹಿತಿ ನೀಡಿದ್ದು, ಬಾಲಕ ಸದಾ ಮೊಬೈಲ್ ನಲ್ಲಿ ಅಶ್ಲೀಲ ಸಿನಿಮಾ ವೀಕ್ಷಿಸುತ್ತಿದ್ದನು, ಮೊಬೈಲ್ ನಲ್ಲಿ ವಿಕೃತ ವಿಡಿಯೋಗಳನ್ನು ನೋಡುತ್ತಿದ್ದನು. ಇದರಿಂದ ಪ್ರೇರೇಪಿತನಾದ ಬಾಲಕ ಬಹಿರ್ದೆಸೆಗೆ ಹೊರಟ ಬಾಲಕಿಯನ್ನು ಹಿಂಬಾಲಿಸಿದ್ದಾನೆ. ಇದನ್ನು ನೋಡಿದ ಬಾಲಕಿ ಓಡಿಹೋದರೂ ಬಿಡದ ಈತ ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆ ನಡೆದ 24 ಗಂಟೆಯೊಳಗೆ ನಳಂದ ಪೊಲೀಸರು ಕಾರ್ಯಾಚರಣೆ ನಡೆಸಿ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ಇನ್ನೂ, 24 ಗಂಟೆಯೊಳಗೆ ಆರೋಪಿ ಸೆರೆ ಹಿಡಿದ ಪೊಲೀಸರಿಗೆ 1 ಲಕ್ಷ ರೂ ಬಹುಮಾನ ಘೋಷಿಸಲಾಗಿದೆ. ಪ್ರಕರಣ ಸಂಬಂಧ ಹತ್ತು ದಿನದೊಳಗಾಗಿ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಲಿದ್ದಾರೆ. ಅಫಜಲಪುರ ತಾಲೂಕಿನ 15 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಮೃತ ಬಾಲಕಿ ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಶೌಚಾಲಯಕ್ಕೆ ಹೋಗಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.
ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ‘ಕೇಂದ್ರ ಸರ್ಕಾರ’ ಮಹತ್ವದ ಘೋಷಣೆ, ಈ ಸಾಲದ ಮೇಲಿನ ‘ಬಡ್ಡಿದರ’ ಇಳಿಕೆ
ಶಿವಮೊಗ್ಗ: ನಾಳೆ ಸೊರಬದ ‘ರಂಗಮಂದಿರ’ದಲ್ಲಿ ‘ಲೋಕಾಯುಕ್ತ ಅಧಿಕಾರಿ’ಗಳಿಂದ ‘ಕುಂದುಕೊರತೆ ಅರ್ಜಿ’ ಸ್ವೀಕಾರ