ಕಲಬುರಗಿ : ಜಾತಿ ನಿಂದನೆ ಕೆಸ್ ಹಾಕಿದ್ದಕ್ಕೆ ಹೆದರಿ ಯುವಕನೊಬ್ಬ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡ್ ಮುಗಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಲಾಡ ಮುಗುಳಿ ಗ್ರಾಮದಲ್ಲಿ ನಿಖಿಲ್ ಪೂಜಾರಿ (23) ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮಗಳು ಎಂಬಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ನಿಖಿಲ್ ನೀಣಿಗೆ ಶರಣಾಗಿರುವ ಘಟನೆ ನಡೆದಿದೆ.
ನಾಲ್ಕು ದಿನದ ಹಿಂದೆ ಗ್ರಾಮದಲ್ಲಿ ಜಾತ್ರೆಯ ವೇಳೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯದವರು ನಡುವೆ ಗಲಾಟೆ ಆಗಿತ್ತು. ಗಲಾಟೆ ಆದ ಬಳಿಕ ಗ್ರಾಮದ ಹಿರಿಯರು ಎರಡು ಸಮುದಾಯಗಳ ನಡುವೆ ರಾಜಿ ಮಾಡಿಸಿದ್ದರು. ಆದರೆ ನಿಖಿಲ್ ವಿರುದ್ಧ ಅನ್ಯ ಸಮುದಾಯದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆದರೆ ಇದರಿಂದ ಹೆದರಿದ ನಿಖಿಲ್ ಜಾತಿ ನಿಂದನೆ ಕೆಸ್ ನಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನ್ಯಾಯಕ್ಕಾಗಿ ಶವವನ್ನು ರಸ್ತೆಯಲ್ಲಿ ನಡೆದುಕೊಂಡು ಕಲಬುರ್ಗಿಗೆ ಆಗಮಿಸುತ್ತಿದ್ದರು ಕುಟುಂಬಸ್ಥರನ್ನು ತಡೆದಿದೆ ಎಂದು ಹೇಳಲಾಗುತ್ತಿದೆ.