ಕಲಬುರ್ಗಿ : ಕಳೆದ ಎರಡು ದಿನಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟ ಸೇತುವೆ ಮೇಲಿಂದ ಬಿದ್ದ ಮಹಿಳೆಯ ಶವ ಇದೀಗ ಪತ್ತೆಯಾಗಿದ್ದು, ಸಂಧ್ಯಾರಾಣಿ (28) ಮೃತ ಮಹಿಳೆ ಎಂದು ತಿಳಿದುಬಂದಿದೆ.
ಹೌದು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟ ಬ್ರಿಡ್ಜ್ ಎರಡು ದಿನಗಳ ಬಳಿಕ ಸಂಧ್ಯಾರಾಣಿ ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಸತತ ಪರಿಶ್ರಮದಿಂದ ಅಗ್ನಿಶಾಮಕ ಸಿಬ್ಬಂದಿಗಳ ತಂಡದಿಂದ ಕಾರ್ಯಾಚರಣೆ ಇದೀಗ ಯಶಸ್ವಿಯಾಗಿದೆ.
ಜುಲೈ 15 ರಂದು ಕಲಬುರ್ಗಿ ಜಿಲ್ಲೆಯ ಕುರಿಕೋಟ ಬ್ರಿಡ್ಜ್ ಮೇಲಿಂದ ಸಂಧ್ಯಾರಾಣಿ ಹಾರಿದ್ದರು.ಬಳಿಕ ಆಕೆಯ ಹಿಂದೆಯೇ ಅನಿಲ್ ಕುಮಾರ್ ಕೂಡ ನದಿಗೆ ಹಾರಿದ್ದ. ಬೆಣ್ಣೆತೋರ ನದಿಯಲ್ಲಿ ಅನಿಲ್ ಕುಮಾರ್ ಶವ ಪತ್ತೆಯಾಗಿತ್ತು.ಆದರೆ ಸಂಧ್ಯಾರಾಣಿ ಮೃತದೇಹ ಪತ್ತೆಯಾಗಿಲ್ಲ ಆದರೆ ಇದೀಗ ಇಂದು ಅವರ ಮೃತದೇಹ ಪತ್ತೆಯಾಗಿದೆ.
ಮೃತ ಸಂಧ್ಯಾರಾಣಿ ಕಲ್ಬುರ್ಗಿ ನಗರದ ಫಿಲ್ಟರ್ ಬೆಡ್ ನಿವಾಸಿ ಎಂದು ಹೇಳಲಾಗುತ್ತಿದೆ. ಮದುವೆಯ ಬಳಿಕ ಮೃತ ಸಂಧ್ಯಾರಾಣಿ ಪತಿಯನ್ನು ತೊರೆದಿದ್ದಳು. ಬ್ರಿಡ್ಜ್ ಮೇಲೆ ನಿಂತು ಒಮ್ಮೆಲೇ ನದಿಗೆ ಹಾರಿದ್ದ ಸಂಧ್ಯಾರಾಣಿ ಅನಿಲ್ ಕುಮಾರ್, ಮಹಾಗಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.