ಕಲಬುರಗಿ: ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದ ಸುಕ್ಷೇತ್ರ ಗಾಣಗಾಪುರದ ದ್ಯಾವಮ್ಮನ ಗುಡಿ ಹತ್ತಿರ ಬೀದಿಬದಿ ಮೃತಪಟ್ಟ ಅನಾಥೆ ವೃದ್ಧೆಯೊಬ್ಬರ ಮೃತ ದೇಹವನ್ನುಅಂತ್ಯಕ್ರಿಯೆ ಮಾಡದೆ ಅಲ್ಲೆ ಬಿಟ್ಟಿರುವ ಹಿನ್ನೆಲೆ, ಬೀದಿ ನಾಯಿಗಳ ಹಿಂಡೊಂದು ಮೃತ ದೇಹವನ್ನು ಕಿತ್ತು ತಿಂದಿರುವುದು.. ಇಡೀ ನಾಗರೀಕ ಸಮಾಜವೇ ತಲೆತಗ್ಗಿಸೋ ಘಟನೆ ಬೆಳಕಿಗೆ ಬಂದಿದೆ.
ಮೃತ ಪಟ್ಟ ವೃದ್ಧೆ ನಿರ್ಗತಿಕರಾಗಿದ್ದು, ಬೀದಿ ಬದಿಯಲ್ಲಿ ವಾಸ ಮಾಡುತ್ತಿದ್ದರು. ಇನ್ನು ದೇವಸ್ಥಾನದ ಬಳಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಭಕ್ತರು, ಭಯದಿಂದ ದೇವಸ್ಥಾನಕ್ಕೆ ಬರುವಂತಾಗಿದೆ. ಮಾಂಸದ ರುಚಿಯನ್ನು ಕಂಡಿರುವ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡಬಲ್ಲವು ಹಾಗಾಗಿ ಬರುವಂತಹ ಭಕ್ತರ ಸುರಕ್ಷಿತ ದೃಷ್ಟಿಯಿಂದಾಗಿ ನಾಯಿಗಳನ್ನು ಸ್ಥಳಾಂತರ ಮಾಡಬೇಕು. ಸದ್ಯ ನೂರಾರು ಜನ ನಿರ್ಗತಿಕರು ಇಲ್ಲಿನ ಸಂಗಮದಲ್ಲಿ ಠಿಕಾಣಿ ಹೂಡಿದ್ದು ಅವರಿಗೆ ಸೂಕ್ತ ಆರೈಕೆ ಸಿಗಬೇಕಾಗಿದೆ.
ಸರಕಾರದಿಂದ ನಿರ್ಗತಿಕರ ಆಶ್ರಮ ನಿರ್ಮಿಸಿ ದೇಗುಲದ ಹೆಸರಿಗೆ ದಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ ಎಂದು ಸ್ಥಳೀಯರು ಮತ್ತು ನಿರ್ಗತಿಕರು ದತ್ತಿ ಇಲಾಖೆಗೆ ಆಗ್ರಹಿಸಿದ್ದಾರೆ.