ಕಲಬುರ್ಗಿ: ಕೊಲೆ ಆರೋಪಿಯಾಗಿದ್ದಂತ ವ್ಯಕ್ತಿಯೊಬ್ಬನನ್ನು ಬಂಧಿಸೋದಕ್ಕೆ ಪೊಲೀಸರು ತೆರಳಿದ್ದರು. ಅವರ ಮೇಲೆ ತಪ್ಪಿಸಿಕೊಳ್ಳೋದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದಂತ ವ್ಯಕ್ತಿಯ ಕಾಲಿಗೆ ಗುಂಡೇಟು ನೀಡಿ, ಬಂಧಿಸಿರೋ ಘಟನೆ ಇಂದು ಕಲಬುರ್ಗಿಯಲ್ಲಿ ನಡೆದಿದೆ.
ಕಲಬುರ್ಗಿಯ ಚೌಕ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಶಾಂತ್ ಎಂಬಾತನ ಮೇಲೆ ಹಾಡ ಹಗಲೇ ಕಲ್ಲು ಎತ್ತಿ ಹಾಕಿ ಮಂಜುನಾಥಸ್ವಾಮಿ ಎಂಬಾತ ಕೊಲೆ ಮಾಡಿದ್ದರು. ಇಂತಹ ಆರೋಪಿ ಕಲಬುರ್ಗಿಯ ಯುನಾನಿ ಆಸ್ಪತ್ರೆಯ ಆವರಣದಲ್ಲಿ ಇರೋ ಮಾಹಿತಿ ತಿಳಿದಂತ ಪೊಲೀಸರು ಬಂಧಿಸೋದಕ್ಕೆ ತೆರಳಿದ್ದರು.
ಪೊಲೀಸರು ಬಂಧಿಸಲು ಬಂದಿರೋ ವಿಷಯವನ್ನು ಅರಿತಂತ ಕೊಲೆ ಆರೋಪಿ ಮಂಜುನಾಥಸ್ವಾಮಿ, ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಮಂಜುನಾಥಸ್ವಾಮಿಯ ಬಲಗಾಲಿಗೆ ಟೌಕ ಠಾಣೆಯ ಸಿಪಿಐ ರಾಜಶೇಖರ ಹಲಗೋದಿ, ಆತ್ಮರಕ್ಷಣೆಗಾಗಿ ಗುಂಡೇಟು ನೀಡಿ, ಬಂಧಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿದ್ದಂತ ಕೊಲೆ ಆರೋಪಿ ಮಂಜುನಾಥಸ್ವಾಮಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದಲ್ಲದೇ ಮಾರಕಾಸ್ತ್ರಗಳ ದಾಳಿಯಿಂದ ಗಾಯಗೊಂಡಂತ ಪೊಲೀಸ್ ಪೇದೆಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ – ನಿತಿನ್ ಗಡ್ಕರಿ
ನಿಜವಾಗ್ತಿದೆ ವೀರ ಬ್ರಹ್ಮೇಂದ್ರ ‘ಕಾಲಜ್ಞಾನ’ ; ಹುಣಸೆ ಮರದಿಂದ ‘ಹೆಂಡ’ ಸೋರಿಕೆ, ವಿಸ್ಮಯ ನೋಡಲು ಮುಗಿಬಿದ್ದ ಜನ