ಕಲಬುರ್ಗಿ : ಜಿಲ್ಲೆಯ ಅವಿಭಿಜಿತ ಚಿತ್ತಾಪುರ ತಾಲೂಕಿನ ಶಹಾಬಾದ್, ಚಿತ್ತಾಪುರ ಕಾಳಗಿಯ ಅಂಗನವಾಡಿ ಕೇಂದ್ರ ಹಾಗೂ ವಿವಿಧ ಶಾಲೆಗಳ 8ರಿಂದ 18 ವರ್ಷದ ಮಕ್ಕಳಿಗಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆಗೊಳಪಟ್ಟ ಒಟ್ಟು 172 ಮಕ್ಕಳ ಪೈಕಿ 90 ಮಕ್ಕಳಲ್ಲಿ ತೀವ್ರ ಹೃದಯ ಕಾಯಿಲೆ ಇರುವ ಆಘಾತಕಾರಿ ವಿಚಾರ ಬೆಳಕಿಗೆಬಂದಿದೆ.
ಸಾಲ ಎಷ್ಟೆ ಇದ್ದರೂ ಕಪ್ಪು ದಾರದ ಪ್ರಯೋಗ ಮಾಡಿ!ಸಾಲ ತಿರೋದು ಗ್ಯಾರಂಟಿ!
ರಾಷ್ಟ್ರೀಯಬಾಲಸ್ವಾಸ್ಥ್ಯಕಾರ್ಯಕ್ರಮದಡಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಚಿತ್ತಾಪುರ ಆರೋಗ್ಯ ಕೇಂದ್ರದಲ್ಲಿ ನಡೆಸಿದ ಆರ್ಬಿಎಸ್ಕೆ ಹಾಗೂ ವೈದೇಹಿ ಆಸ್ಪತ್ರೆ ಹೃದಯ, ನರರೋಗ ತಜ್ಞರ ವಿಶೇಷ ತಂಡ ಆರೋಗ್ಯ ತಪಾಸಣೆಯಲ್ಲಿ ಈ ಸಂಗತಿ ಹೊರಬಿದ್ದಿದೆ.ತಪಾಸಣೆಗೊಳಪಟ್ಟ 172 ಮಕ್ಕಳಲ್ಲಿ 90 ಮಕ್ಕಳು ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದು,
41 ಮಕ್ಕಳಲ್ಲಿ ಹೃದಯ ಕಾಯಿಲೆ ತೀವ್ರವಾಗಿರುವುದು ಕಂಡು ಬಂದಿದೆ. ಅವರಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ವೈದೇಹಿ ಆಸ್ಪತ್ರೆ ಬೆಂಗಳೂರಿಗೆ ಶಿಫಾರಸ್ಸು ಮಾಡಲಾಗಿದೆ.ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿರುವ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಅವರು, ಶಾಲಾ ಮಕ್ಕಳಲ್ಲಿ ಕಂಡು ಬಂದ ಹೃದಯ, ನರ ಸಂಬಂಧಿತ ರೋಗಗಳು ಮಕ್ಕಳಿಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು ಎಂದಿದ್ದಾರೆ.
ಇಂದು ‘ಜಮ್ಮುವಿಗೆ’ ಪ್ರಧಾನಿ ಮೋದಿ ಭೇಟಿ: 32 ಸಾವಿರ ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ