ಕಲಬುರ್ಗಿ : ತವರು ಮನೆಗೆ ಹೋಗಿದ್ದ ತನ್ನ ಪತ್ನಿಯನ್ನು ಕರೆತರುವಂತೆ ಪತಿಯೊಬ್ಬ ಕುಡಿದ ನಶೆಯಲ್ಲಿ ಪೊಲೀಸ್ ಠಾಣೆಗೆ ಬಂದು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ನಡೆದಿದೆ.
ಚಿಂಚೋಳಿ ತಾಲ್ಲೂಕಿನ ಚಿಂತಕುಂಟಾ ಗ್ರಾಮದ ನಿವಾಸಿ ಶಿವಕುಮಾರ ಅಮೃತ ಕಟ್ಟಿಮನಿ (28) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.ವಾಹನ ಚಾಲಕನಾದ ಶಿವಕುಮಾರ ಮದ್ಯ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ಬಂದಿದ್ದ. ತನ್ನ ಹೆಂಡತಿ ಯಲಕಪಳ್ಳಿಯ ತನ್ನ ತವರು ಮನೆಗೆ ಹೋಗಿದ್ದಾಳೆ. ಅವಳನ್ನು ಕರೆ ತಂದು ನನ್ನ ಜೊತೆಗೆ ಕಳುಹಿಸಬೇಕು ಎಂದು ಹೆಡ್‌ಕಾನ್‌ಸ್ಟೆಬಲ್ ಸುರೇಶ್ ಅವರಿಗೆ ಕೇಳಿಕೊಂಡರು.
ಬಾಯಾರಿಕೆ ಆಗುತ್ತದೆ ಎಂದ ಶಿವಕುಮಾರ, ಠಾಣೆಯಲ್ಲಿದ್ದ ನೀರನ್ನು ಗ್ಲಾಸ್‌ನಲ್ಲಿ ತುಂಬಿಕೊಂಡರು. ನನ್ನ ಹೆಂಡತಿಯನ್ನು ನೀವು ಕರೆಸದೆ ಇದ್ದರೇ ಇಲ್ಲಿಯೇ ಸತ್ತು ಹೋಗುತ್ತೇನೆ ಎಂದು ಜೇಬಿನಲ್ಲಿ ಇರಿಸಿದ್ದ ಮಾತ್ರೆಗಳನ್ನು ಬಾಯಿಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಆತನ ವಿರುದ್ಧ ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.