ಕಲಬುರಗಿ : ಶಾಲಾ ಬಾಲಕನನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ. 4 ರಂದು ಶಾಲಾ ಬಾಲಕನನ್ನು ಖದೀಮರು ಅಪಹರಿಸಿದ್ದರು, ನಂತರ ಬಾಲಕನ ತಂದೆಗೆ ಕರೆಮಾಡಿ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಬಾಲಕನ ತಂದೆ ದೂರಿನ ಹಿನ್ನೆಲೆ ಅಲರ್ಟ್ ಆದ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಗುರುನಾಥ್ ರಾಠೋಡ್ ಎನ್ನುವ ಸರ್ಕಾರಿ ಶಾಲಾ ಶಿಕ್ಷಕ ಗುರುನಾಥನ ಪುತ್ರ ಸುದರ್ಶನನನ್ನು ಆಟೋದಲ್ಲಿ ಅಪಹರಣ ಮಾಡಿದ್ದರು ನಂತರ ನಂತರ ಶಿಕ್ಷಕ ಗುರುನಾಥ್ಗೆ ಅಪಹರಣಕಾರರು ಕರೆ ಮಾಡಿದ್ದು, ನಿಮ್ಮ ಮಗ ಜೀವಂತ ಬೇಕಾದ್ರೆ ಹತ್ತು ಲಕ್ಷ ಹಣ ನೀಡಬೇಕು ಅಂತ ಬೇಡಿಕೆ ಇಟ್ಟಿದ್ದರು, ಹಣ ಕೊಡದೇ ಇದ್ದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು. ಆದ್ರೆ ಈ ಬಗ್ಗೆ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ಶಿಕ್ಷಕ ಗುರುನಾಥ್ ಮಾಹಿತಿ ನೀಡಿದ್ದರು. ಬಂಧಿತರನ್ನು ಅರುಣ್ ಭಜಂತ್ರಿ , ಲಕ್ಷಣ್ ಭಜಂತ್ರಿ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಂತೆ ಬಾಲಕನನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ನಿನ್ನೆ ರಾತ್ರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
BIGG NEWS : ಮಂಗಳೂರು ಸ್ಪೋಟ ಪ್ರಕರಣ : ‘NIA’ ಅಧಿಕಾರಿಗಳಿಂದ ಶಂಕಿತ ವಿದ್ಯಾರ್ಥಿ ರಿಹಾನ್ ಶೇಖ್ ಮನೆ ಮಹಜರು
ʻವಂದೇ ಭಾರತ್ ಎಕ್ಸ್ಪ್ರೆಸ್ʼಗೆ ಕಲ್ಲು ತೂರಿದ ಮೂವರು ಅಪ್ರಾಪ್ತರು ಅರೆಸ್ಟ್ | Vande Bharat Express