ಕಲಬುರಗಿ : ʻಕಲಬುರಗಿ ನಗರ ಮಾದಕ ವಸ್ತುಗಳ ಹಬ್ʼ ಅಗ್ತಿದೆ. ಈ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಆರಗ ಜ್ಞಾನೇಂದ್ರ ಏನಾದರೂ ಕತ್ತೆ ಕಾಯುತ್ತಿದ್ದಾರಾ? ಎಂದು ಮಾಧ್ಯಮಗಳ ಮುಂದೆಯೇ ಗೃಹಸಚಿವ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ
ಸುದ್ದಿಗಾರೊಂದಿಗೆ ಮಾತನಾಡಿದ ಅವರು , ಕಲಬುರಗಿಯಲ್ಲಿ ಒಂದು ಸಾವಿರ ಕೇಜಿಯಷ್ಟು ಗಾಂಜಾವನ್ನು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡುತ್ತಾರೆ, ಅದರ ಅರ್ಥ ಡ್ರಗ್ ಮಾಫಿಯಾದೊಂದಿಗೆ ಸ್ಥಳೀಯ ಪೊಲೀಸರು ಶಾಮೀಲಾಗಿದ್ದಾರೆ, ಎಂದು ಖರ್ಗೆ ಆರೋಪಿಸಿದ್ದು ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ವ್ಯವಸ್ತೆಯನ್ನು ಸರಿ ಪಡಿಸಬೇಕಾದ ಆರಗ ಜ್ಞಾನೇಂದ್ರ ಏನಾದರೂ ಕತ್ತೆ ಕಾಯುತ್ತಿದ್ದಾರಾ? ಎಂದು ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.