ಕಲಬುರಗಿ: ಜಿಲ್ಲೆಯ ಆಳಂದದಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಮೆ ಮಾಡಿರುವ ಘಟನೆ ನಡೆದಿದೆ.
BIGG NEWS: ಹನಿಟ್ರ್ಯಾಪ್ ಬಗ್ಗೆ ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದೇನು ಗೊತ್ತಾ?
ನಿನ್ನೆ ಸಂಜೆ ಮೂರು ಗಂಟೆ ಸಮಯದಲ್ಲಿ ಬಹಿರ್ದೇಸೆಗೆ ಅಂತ ಹೋದವಳು ಮನೆಗೆ ವಾಪಸ್ ಬರಲಿಲ್ಲ. ಹುಡುಕಾಡಿದಾಗ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕಬ್ಬಿನ ಗದ್ದೆಯಲ್ಲಿ ಅಸ್ತವ್ಯಸ್ತ ರೀತಿಯಲ್ಲಿ ಬಾಲಕಿ ಶವ ಪತ್ತೆಯಾಗಿದ್ದು, ಅತ್ಯಚಾರ ಮಾಡಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸಂಬಂಧಿಕರ ಮನೆಯಲ್ಲಿ ಇದ್ದಳು. ಸ್ಥಳಕ್ಕೆ ಕಲಬುರಗಿ ಎಸ್ ಪಿ ಇಶಾಪಂತ್ ಸೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.