ಕಲಬುರಗಿ: ನಗರದ ಆಳಂದ ಚೆಕ್ ಪೋಸ್ಟ್ ಬಳಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಸಯ್ಯಾ ಗುತ್ತೇದಾರ, ದಸ್ತಯ್ಯಾ ಗುತ್ತೇದಾರ, ರಾಜು, ಶಾಂತಿಬಾಯಿ ಸೇರಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ನಗರದ ಸಬ್-ಅರ್ಬನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಜೈ ಭವಾನಿ ಮರಾಠ ಖಾನಾವಳಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಫೈರಿಂಗ್ ನಡೆದಿತ್ತು. ಕಾಂಗ್ರೆಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಪಾಟೀಲ್ ಸಹೋದರ ಚನ್ನವೀರ ಪಾಟೀಲ್ ಮೇಲೆ ಗುಂಡಿನ ದಾಳಿ ನಡೆದಿತ್ತು.
BREAKING NEWS: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ಭಯಾನಕ ಕೃತ್ಯ; ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗೆ ಬೆಂಕಿ
ಘಟನೆಯಲ್ಲಿ ಚನ್ನವೀರ ಕೈಗೆ ಗುಂಡು ತಗುಲಿದ್ದು, ಅಬ್ಬುಬೂಕರ್ ಎಂಬವರ ಕಾಲಿಗೂ ಗುಂಡು ತಗುಲಿತ್ತು.ದುಷ್ಕರ್ಮಿಗಳು ಬೊಲೆರೊ ವಾಹನದಲ್ಲಿ ಬಂದು ಗುಂಡಿನ ದಾಳಿ ನಡೆಸಿ, ವಾಹನವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸಬ್-ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.