ಕಲಬುರ್ಗಿ : ಬೆಳೆ ಬೆಳೆಯಲು ಫೈನಾನ್ಸ್ ಒಂದರಲ್ಲಿ ಲಕ್ಷಾಂತರ ಸಾಲ ಪಡೆದಿದ್ದ ರೈತ ಅವರ ಕಿರುಕುಳ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನರನಾಳ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ನರನಾಳ ಗ್ರಾಮದ ನಾಗಪ್ಪ ಎಂದು ತಿಳಿದು ಬಂದಿದೆ. ನಾಗಪ್ಪ ಫೈನಾನ್ಸ್ ಒಂದರಲ್ಲಿ ಎರಡು ಲಕ್ಷ ರೂಪಾಯಿ ಬೆಳೆ ಸಾಲ ತೆಗೆದಿದ್ದ. ಈ ವೇಳೆ ಫೈನಾನ್ಸ್ ನವರು ಮನೆಗೆ ಬಂದು ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ನಾಗಪ್ಪ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಘಟನೆ ಕುರಿತಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.