ಕಲಬುರ್ಗಿ : ಪಿಎಸ್ಐ ಹಗರಣದಲ್ಲಿ ಜೈಲು ಸೇರಿದ್ದ ಆರೋಪಿಗಳಾದ ಆರ್‌ಡಿ ಪಾಟೀಲ್ ಹಾಗೂ ದಿವ್ಯ ಹಾಜರಾಗಿ ಮನೆಗೆ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ ಭೇಟಿ ನೀಡಿದ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ ವಿರುದ್ಧ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ಇದೀಗ ಕಾಂಗ್ರೆಸ್ ದೂರು ನೀಡಿದೆ.ಮಾಜಿ ಎಂಎಲ್ಸಿ ರಮೇಶ್ ಬಾಬು ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ಮನೆಗೆ ಭೇಟಿಯೇ ನೀಡಿದರಿಂದ ಆರ್.ಡಿ ಪಾಟೀಲ್ ನಿವಾಸಕ್ಕೆ ಉಮೇಶ್ ಯಾದವ್ ಭೇಟಿ ನೀಡಿದ್ದರು.ಮತ್ತೋರ್ವ ಆರೋಪಿ ದಿವ್ಯ ಹಾಗರಗಿ ಜೊತೆ ಮೆರವಣಿಗೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಉಮೇಶ್ ಜಾಧವ್ ವಿರುದ್ಧ ದೂರು ನೀಡಿದೆ.