ಕಲಬುರ್ಗಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯಾದಂತಹ ಅಪರಾಧ ಚಟುವಟಿಕೆಗಳು ಹಾಗೂ ಅಕ್ರಮಗಳು ನಡೆಯದಂತೆ ಪೊಲೀಸ್ ಸರು ತೀವ್ರ ಪಟ್ಟಚರ ವಹಿಸಿದ್ದು ಇದೀಗ ಕಲ್ಬುರ್ಗಿ ಜಿಲ್ಲಾ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಕಲಬುರಗಿ ನಗರದ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರೂ ದಾಳಿ ನಡೆಸಿದ್ದಾರೆ.ಕಲಬುರ್ಗಿ ಪೊಲೀಸ್ ಆಯುಕ್ತ ಆರ್ ಚೇತನ ನೇತೃತ್ವದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಚುನಾವಣೆ ಹೊತ್ತಲ್ಲಿ ಜೈಲಿನಿಂದಲೇ ಅಪರಾಧ ಚಟುವಟಿಕೆ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.ಪೊಲೀಸರ ದಾಳಿಯ ವೇಳೆ ಕೈದಿಗಳ ಬಳಿ ಗುಟುಕಾ ಹಾಗೂ ನಗದು ಪತ್ತೆಯಾಗಿದೆ. ಫಾರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.