ಕಲಬುರಗಿ : ಜಿಲ್ಲೆಯ ಆಳಂದ್ ಪಟ್ಟಣದ ಬಳಿ ಇರುವ ಲಾಡ್ಲೆ ಮಶಾಕದಲ್ಲಿ ದರ್ಗಾದಲ್ಲಿ ಶಿವರಾತ್ರಿ ಅಂಗವಾಗಿ ಶಿವಲಿಂಗ ಪೂಜೆ ನಡೆಯಲಿದೆ. ಅದರ ಅಂಗವಾಗಿ ಇಂದು ಕಲಬುರ್ಗಿ ನಗರದಿಂದ ಆಳಂದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀರಾಮ ಸೇನೆಯ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಆಳಂದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಥಿಗಳೇ ಗೊಂದಲ ಬೇಡ: ನಿಗದಿಯಂತೆ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ- ಶಿಕ್ಷಣ ಇಲಾಖೆ ಮಾಹಿತಿ
ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಹಾಗೂ ಮುಸ್ಲಿಮರಿಗೆ ಪ್ರಾರ್ಥನೆ ನಡೆಸಲು ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಎರಡು ಸಮುದಾಯಕ್ಕೂ ಕೂಡ ಅವಕಾಶ ನೀಡಿದೆ.ಹಿಂದುಗಳಿಗೆ ಪೂಜೆಗೆ ಅವಕಾಶ ಹಾಗೂ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶವನ್ನು ಕಲಬುರ್ಗಿ ವಿಭಾಗದ ಹೈಕೋರ್ಟ್ ಅವಕಾಶ ನೀಡಿದೆ.
ರಾಜ್ಯದಲ್ಲಿ ಮುಂದಿನ ವರ್ಷ ‘ವಚನ ವಿಶ್ವ ವಿದ್ಯಾಲಯ’ ಸ್ಥಾಪನೆಗೆ ನಿರ್ಧಾರ : ಸಿಎಂ ಸಿದ್ದರಾಮಯ್ಯ
ದರ್ಗಾದ ಅವರಣದಲ್ಲಿರುವ ಶಿವಲಿಂಗಪೂಜೆ ಕುರಿತಂತೆ ಇಂದು ಮಧ್ಯಾಹ್ನ 12:30 ರಿಂದ 3:30ರ ವರೆಗೆ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಲಾಗಿದ್ದು, ಲಾಡ್ಲೆ ಮಾಶಾಕ್ ದರ್ಗಾದಲ್ಲಿ 15 ಜನ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶ ನೀಡಿದೆ.ನಂತರ ಸಂಜೆ ನಾಲ್ಕು ಗಂಟೆಯಿಂದ ಮಧ್ಯರಾತ್ರಿ ವರೆಗೆ ಶಿವಲಿಂಗ ಪೂಜೆಗೆ ಹಿಂದುಗಳಿಗೆ ಅವಕಾಶ ನೀಡಲಾಗಿದೆ. 15 ಜನ ಹಿಂದೂಗಳಿಗೆ ಮಾತ್ರ ಕಲ್ಬುರ್ಗಿ ವಿಭಾಗದ ಹೈಕೋರ್ಟ್ ಅವಕಾಶ ನೀಡಿದೆ.
ಇಂದು ‘ಶಿವರಾತ್ರಿ’ ಪ್ರಯುಕ್ತ ದೇವಾಲಯಗಳಲ್ಲಿ ‘ವಿಶೇಷ ಅಭಿಷೇಕ, ಹೋಮ’ಕ್ಕೆ ‘ರಾಜ್ಯ ಸರ್ಕಾರ’ ಆದೇಶ
ಆದರಿಂದ ಇದೀಗ ಲಾಡ್ಲೆ ಮಾಶಾಕ್ ದರ್ಗಾದ ಸುತ್ತಮುತ್ತಲು ಯಾವುದೇ ರೀತಿಯಾದಂತಹ ಅಹಿತಕರ ಘಟನೆ ನಡೆದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದು ವರ್ಷ ಈ ಒಂದು ದರ್ಗಾದಲ್ಲಿ ಶಿವರಾತ್ರಿಯ ಅಂಗವಾಗಿ ಶಿವಲಿಂಗ ಪೂಜೆ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಇದೀಗ ಮತ್ತೆ ಘಟನೆ ಮರುಕಳಿಸಬಾರದು ಇದೀಗ ಬಿಗಿ ಭದ್ರತೆ ಒಲಿತಗಿಸಲಾಗಿದೆ.
ಮದ್ಯ ಮಾರಾಟ ನಿಷೇಧ
ಇಂದು ಗೌರಿ ಜಿಲ್ಲೆಯ ಆಳನ್ ಪಟ್ಟಣದಲ್ಲಿರುವ ಲಾಡ್ಲಿಮಶಾಕ್ ದರ್ಗಾದಲ್ಲಿ ರಾಗವ ಚೈತನ್ಯ ಶಿವಲಿಂಗಕ್ಕೆ ಮಹಾಪೂಜೆ ಹಿನ್ನೆಲೆ ಮಾರ್ಚ್ 7ರ ರಾತ್ರಿ 11 ರಿಂದ ಮಾರ್ಚ್ 9 ರ ಬೆಳಗ್ಗೆ 6:30 ವರೆಗೆ ಮಧ್ಯ ಮಾರಾಟ ನಿಷೇಧಿಸಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಎರಡು ಸಮುದಾಯಕ್ಕೂ ಹೈಕೋರ್ಟಿಯ ಪೀಠ ಪ್ರಾರ್ಥನೆಗೆ ಮತ್ತು ಪೂಜೆಗೆ ಅವಕಾಶ ನೀಡಿದೆ. ಹೀಗಾಗಿ ಮಧ್ಯಮ ಮಾರಾಟ ನಿಷೇಧಿಸಿ ಎಂದು ಕಲಬುರ್ಗಿ ಜಿಲ್ಲಾಧಿಕಾರಿ ಪೌಜಿಯ ತರುನ್ನಮ್ ಆದೇಶ ಹೊರಡಿಸಿದ್ದಾರೆ.