ಕಲಬುರ್ಗಿ : ಒಳ ಮೀಸಲಾತಿ ಸಂಬಂಧ ಇಂದು ಕಲಬುರ್ಗಿ ಜಿಲ್ಲಾ ಮಾದಿಗರ ಒಕ್ಕೂಟವು ಕಲ್ಬುರ್ಗಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಳಮಿಸಲಾತಿ ಜಾರಿಗೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ಮಾದಿಗರ ಒಕ್ಕೂಟವು ಮನವಿ ಮಾಡಿದೆ.
ಹೌದು ಒಳ ಮೀಸಲಾತಿ ಜಾರಿ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಲಾಯಿತು. ಕಲಬುರ್ಗಿ ಜಿಲ್ಲಾ ಮಾದಿಗರ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮನವಿ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡುವಂತೆ ಮನವಿ ಸಲ್ಲಿಸಿದರು. ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಗೆ ಮನವಿ ಮಾಡಿದರು.