ಕಲಬುರ್ಗಿ : ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕೋಪಗೊಂಡ ರೈತ ಪರ ಹೋರಾಟಗಾರ ಒಬ್ಬ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಪುರಸಭೆ ಕಚೇರಿಗೆ ನುಗ್ಗಿ ಎಳೆದಾಡಿ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲಿ ನಡೆಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ನಡೆದಿದೆ.
ಆರೋಗ್ಯ ನಿರೀಕ್ಷಕನ ಮೇಲೆ, ರೈತಪರ ಹೋರಾಟಗಾರ ಮಹೇಶ್ ರಾಠೋಡ್ ಇಂದ ಈ ಒಂದು ಕೃತ್ಯ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಪುರಸಭೆಯಲ್ಲಿ ನಡೆದಿದ್ದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಜಶೇಖರಯ್ಯ ಮೇಲೆ ಅಲ್ಲೇ ನಡೆಸಿದ್ದಾರೆ. ಕಚೇರಿಗೆ ನುಗ್ಗಿ ಎಳೆದಾಡಿ ಹೊರಗೆ ಎಳೆದುಕೊಂಡು ಹೋಗಿ ಮಹೇಶ್ ಹಲ್ಲೆ ಮಾಡಿದ್ದಾರೆ.
ಕೆಲ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ್ದನ್ನು ಖಂಡಿಸಿ, ಧರಣಿ ನಡೆಸುತ್ತಿದ್ದರು. ಹೋರಾಟಗಾರ ಮಹೇಶ್ ರಾಠೋಡ್ ನೇತೃತ್ವದಲ್ಲಿ ಧರಣಿ ನಡೆಸುತ್ತಿದ್ದರು. ಕಳೆದ 8 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಕೂಡ ಅಧಿಕಾರಿ ಸ್ಪಂದಿಸುತ್ತಿಲ್ಲವೆಂದು ಕುಪಿತಗೊಂಡು ಹಲ್ಲೆ ಮಾಡಿದ್ದಾರೆ. ಮಹೇಶ್ ರಾಠೋಡ್ ವಿರುದ್ಧ ಕ್ರಮಕ್ಕೆ ಪುರಸಭೆ ಸಿಬ್ಬಂದಿ ಇದೀಗ ಒತ್ತಾಯ ಮಾಡಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.