ಕೆಎನ್ಎನ್ಸಿನಿಮಾಡೆಸ್ಕ್: ಹಾಲಿವುಡ್ ಮತ್ತು ಬಾಲಿವುಡ್ನಲ್ಲಿ ತನ್ನ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿರುವ, ಅಂತರಾಷ್ಟ್ರೀಯ ಖ್ಯಾತಿಯ ನಟ ಕಬೀರ್ ಬೇಡಿ. ‘ಸಂದೀಕನ್’ ಟಿವಿ ಸೀರಿಸ್ ಮೂಲಕ ಯುರೋಪ್ನಾದ್ಯಂತ ಪ್ರಸಿದ್ದಿ ಪಡೆದ ಅಪ್ಪಟ ಭಾರತದ ಪ್ರತಿಭೆ ಕಬೀರ್ ಬೇಡಿ ಅವರಿಗೆ ದೇಶ-ವಿದೇಶಗಳಲ್ಲಿ ದೊಡ್ಡ ಸಂಖ್ಯೆೆಯ ಅಭಿಮಾನಿ ಬಳಗವಿದೆ. ತನ್ನ ವಿಭಿನ್ನ ಮ್ಯಾನರಿಸಂ, ವಿಶಿಷ್ಟ ಧ್ವನಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ನಟನಾಗಿ ಗುರುತಿಸಿಕೊಂಡಿರುವ ಕಬೀರ್ ಬೇಡಿ, ಈಗ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುವ ಮೂಲಕ ಚಂದನವನಕ್ಕೆೆ ಕಾಲಿಡುತ್ತಿದ್ದಾರೆ.
ಹೌದು, ತುಳುನಾಡಿನ ದೈವ ಕೊರಗಜ್ಜನ ಕುರಿತಾಗಿ ತಯಾರಾಗುತ್ತಿರುವ ‘ಕರಿ ಹೈದ ಕರಿ ಅಜ್ಜ’ ಸಿನಿಮಾದಲ್ಲಿ ನಟ ಕಬೀರ್ ಬೇಡಿ ರಾಜನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಕರಿ ಹೈದ ಕರಿ ಅಜ್ಜ’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿರುವ ಕಬೀರ್ ಬೇಡಿ, ತಮ್ಮ ಮೊದಲ ಕನ್ನಡ ಸಿನಿಮಾದ ಬಗ್ಗೆೆ ಸಾಕಷ್ಟು ನಿರೀಕ್ಷೆೆಯ ಮಾತುಗಳನ್ನಾಾಡಿದ್ದಾರೆ.
‘ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದು, ತುಂಬ ಖುಷಿ ತಂದಿದೆ. ‘ಕರಿ ಹೈದ ಕರಿ ಅಜ್ಜ’ ಸಿನಿಮಾದಲ್ಲಿ ನನ್ನದು ರಾಜನ ಪಾತ್ರ. ಆದಿವಾಸಿ ಸಮುದಾಯದ ದೈವದ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇಡೀ ಚಿತ್ರತಂಡ ಸಾಕಷ್ಟು ಪರಿಶ್ರಮ ವಹಿಸಿ, ಒಂದು ಒಳ್ಳೆೆಯ ಸಿನಿಮಾವನ್ನು ತೆರೆಗೆ ತರುತ್ತಿದೆ. ಶ್ರುತಿ, ಭವ್ಯಾ, ಭರತ್ ಸೂರ್ಯ ಮುಂತಾದ ಕಲಾವಿದರ ಜೊತೆ ಅಭಿನಯಿಸಿದ್ದು ಒಳ್ಳೆೆಯ ಅನುಭವ. ಇದೊಂದು ಅಪರೂಪದ ಸಿನಿಮಾವಾಗಲಿದೆ’ ಎಂಬ ವಿಶ್ವಾಾಸ ಕಬೀರ್ ಬೇಡಿ ಅವರದ್ದು.
‘ಕನ್ನಡದಲ್ಲಿ ಮೊದಲ ಬಾರಿಗೆ ಒಳ್ಳೆೆಯ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಮುಂದೆಯೂ ಒಳ್ಳೆೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ಅಭಿನಯಿಸಲು ಸಿದ್ದ’ ಎನ್ನುವುದು ಕಬೀರ್ ಬೇಡಿ ಮಾತು.
‘ಧ್ರುತಿ ಕ್ರಿಯೇಷನ್ಸ್’ ಮತ್ತು ‘ಸಕ್ಸಸ್ ಫಿಲಂಸ್’ ಬ್ಯಾನರ್ನಡಿ ‘ಕರಿ ಹೈದ ಕರಿ ಅಜ್ಜ’ ಸಿನಿಮಾವನ್ನು ತ್ರಿವಿಕ್ರಮ ಸಾಫಲ್ಯ ನಿರ್ಮಿಸುತ್ತಿದ್ದು, ಸಿನಿಮಾಕ್ಕೆೆ ಸುಧೀರ್ ಅತ್ತಾವರ್ ನಿರ್ದೇಶನವಿದೆ.