ಬೆಂಗಳೂರು : ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಈ ವಿಚಾರಕ್ಕೆ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಬೇಕಿದ್ದರೆ ನೋಡಿ ಖರ್ಗೆ ಕೈ, ಕಾಲು ಕಟ್ಟಿ ಹೈಕಮಾಂಡ್ ಕೆಲಸ ಮಾಡಿಸುತ್ತದೆ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು ಕನ್ನಡಿಗನಾಗಿ. ನಾನು ಸಂತೋಷಪಡುತ್ತೇನೆ. ಆದರೆ ಯಾವ ಸ್ಥಿತಿಯಲ್ಲಿ ಖರ್ಗೆಯವರನ್ನು ಆಯ್ಕೆ ಮಾಡಿದ್ದಾರೆ, ಯಾವ ಸನ್ನಿವೇಶದಲ್ಲಿ ಕೂರಿಸಿದ್ದಾರೆ? ಹೈಕಮಾಂಡ್ ಖರ್ಗೆ ಅವರ ಎರಡೂ ಕೈ ಕಾಲು ಕಟ್ಟಿ ಹಾಕಿ, ಕೆಲಸ ಮಾಡಿಸುತ್ತಾರೆ ಎಂದಿದ್ದಾರೆ.
ಖರ್ಗೆ ಅಧ್ಯಕ್ಷ ಪಟ್ಟಕ್ಕೆ ನಾಮಿನೇಷನ್ ಸಲ್ಲಿಸುವಾಗಿನಿಂದ ಕಾಂಗ್ರೆಸ್ ನಲ್ಲಿ ಯಾರಿಗೂ ಸಂತೋಷವೇ ಇರಲಿಲ್ಲ, ಯಾರಾದರೂ ಕರ್ನಾಟಕದ ರಾಜಕಾರಣಿ ಸಂತಸ ವ್ಯಕ್ತಪಡಿಸಿದ್ದಾರಾ ಎಂದು ಹೇಳಿದ್ದಾರೆ.
ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ : ಮಲ್ಲಿಕಾರ್ಜುನ ಖರ್ಗೆ
ನಾವೆಲ್ಲರೂ ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡಬೇಕು, ಪಕ್ಷದಲ್ಲಿ ಯಾರೂ ದೊಡ್ಡವರಲ್ಲ ಅಥವಾ ಸಣ್ಣವರಲ್ಲ. ಕೋಮುವಾದದ ಸೋಗಿನಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಾನು ಪಕ್ಷದ ಸಿಪಾಯಿ ಮತ್ತು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಸೋನಿಯಾ ಗಾಂಧಿ ಅವರಿಗೆ ಧನ್ಯವಾದಗಳು. ಅವರ ನೇತೃತ್ವದಲ್ಲಿ ನಾವು ಎರಡು ಬಾರಿ ಕೇಂದ್ರದಲ್ಲಿ ಸರ್ಕಾರ ರಚಿಸಿದ್ದೇವೆ. ರಾಜ್ಯಗಳಲ್ಲೂ ನಾವು ಬಲಿಷ್ಠರಾಗಿದ್ದೆವು. ಅವರ ಪಾತ್ರ ನೆನಪಿನಲ್ಲಿ ಉಳಿಯುತ್ತದೆ ಎಂದು ಖರ್ಗೆ ಹೇಳಿದ್ದಾರೆ. ಆಂತರಿಕ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಿದ್ದ ಶಶಿ ತರೂರ್ (Shashi Tharoor) ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದರು.
ಕೋಲಾರ : ಹಾಸ್ಟೆಲ್ ನಲ್ಲಿ ಹಲ್ಲಿ ಬಿದ್ದಿದ್ದ ಆಹಾರ ಸೇವಿಸಿ 34 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ
‘ಜೋಡೋ’, ‘ಸಂಕಲ್ಪ’ ಯಾತ್ರೆ ಬೆನ್ನಲ್ಲೇ ಜೆಡಿಎಸ್ ನಿಂದ ‘ಪಂಚರತ್ನ ರಥಯಾತ್ರೆ’ : ನ.1 ರಂದು ಚಾಲನೆ