ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರ ಮೇಲೆ ಕೆ.ಜಿ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ವಿಚಾರದ ಕುರಿತು ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ.ಪಿಎಫ್ಐ ಕೇಂದ್ರ ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದ್ದ ವೇಳೆ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಪತ್ತೆಯಾಗಿವೆ.
BIGG NEWS: ಇನ್ನು 6 ವರ್ಷದಲ್ಲಿ ಕಲಿಯುಗ ಅಂತ್ಯ; ಬ್ರಹ್ಮಾಂಡ ಗುರೂಜಿ ಭಯಂಕರ ಭವಿಷ್ಯ
ಎಸ್ಕೆ ಗಾರ್ಡನ್ ಕಚೇರಿಯಲ್ಲಿ ಎರಡು ಎಚ್ಎಚ್ಎಂಡಿ ಮೆಟಲ್ ಡಿಟೆಕ್ಟರ್ ಪತ್ತೆಯಾಗಿದೆ.
ಪೊಲೀಸ್, ಭದ್ರತಾ ಏಜೆನ್ಸಿಗಳ ಬಳಿ ಇರುವಂತಹ ಮೆಟಲ್ ಡಿಟೆಕ್ಟರ್ ಇವುಗಳಾಗಿವೆ. ಸಾರ್ವಜನಿಕ ಸಭೆಯಲ್ಲಿ ಮೆಟಲ್ ಡಿಟೆಕ್ಟರ್ ಕಣ್ತಪ್ಪಿಸಿ ಹೋಗಲು ತರಬೇತಿ ನೀಡಲಾಗುತ್ತಿತ್ತು. ಗನ್, ಮಚ್ಚು, ಲಾಂಗ್ ಹೀಗೆ ಯಾವುದಕ್ಕೆ ಸೌಂಡ್ ಮಾಡುತ್ತೆ ಅಂತ ಪರೀಕ್ಷೆ ಮಾಡಲಾಗುತ್ತದೆ. ವಿಧ್ವಂಸಕ ಕೃತ್ಯ ಎಸಗುವ ವೇಳೆ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ.