Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಹೋಟೆಲ್, ಟೀ ಅಂಗಡಿಯಲ್ಲಿ ‘ಮನೆ ಗ್ಯಾಸ್’ ಬಳಸುವವರೇ ಎಚ್ಚರ : ರಾಜ್ಯಾದ್ಯಂತ `ಅಗತ್ಯ ವಸ್ತುಗಳ ಕಾಯ್ದೆ ಅಡಿ’ 316 ಕೇಸ್ ದಾಖಲು !

15/03/2026 11:30 AM

(ಜೇಷ್ಠಾ ಲಕ್ಷ್ಮಿ) ದರಿದ್ರ ಲಕ್ಷ್ಮೀ ಹೋಗಿ ಸೌಭಾಗ್ಯ ಲಕ್ಷ್ಮಿ ಮನೆಯಲ್ಲಿ ನೆಲೆಸುವ ಸೂತ್ರ..!!

15/03/2026 11:29 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ಮುಂದೆ `ಜಾತಿ ಮತ್ತು ಆದಾಯ ಪ್ರಮಾಣ ಪತ್ರ’ ಲಭ್ಯ !

15/03/2026 11:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » (ಜೇಷ್ಠಾ ಲಕ್ಷ್ಮಿ) ದರಿದ್ರ ಲಕ್ಷ್ಮೀ ಹೋಗಿ ಸೌಭಾಗ್ಯ ಲಕ್ಷ್ಮಿ ಮನೆಯಲ್ಲಿ ನೆಲೆಸುವ ಸೂತ್ರ..!!
KARNATAKA

(ಜೇಷ್ಠಾ ಲಕ್ಷ್ಮಿ) ದರಿದ್ರ ಲಕ್ಷ್ಮೀ ಹೋಗಿ ಸೌಭಾಗ್ಯ ಲಕ್ಷ್ಮಿ ಮನೆಯಲ್ಲಿ ನೆಲೆಸುವ ಸೂತ್ರ..!!

By kannadanewsnow0515/03/2026 11:29 AM

ಮನೋಹರವಾದ ಕೈಲಾಸ ಶಿಖರದ ಮಧ್ಯೆ ಪ್ರಸನ್ನವನದನಾಗಿದ್ದ ಶಿವನನ್ನು ಕುರಿತು, ಪಾರ್ವತಿ ಪ್ರಶ್ನೆ ಮಾಡಿದಳು. ಸ್ವಾಮಿ ಸ್ತ್ರೀಯರಿಗೆ ಸಕಲ ಸೌಭಾಗ್ಯ ಧನ ಧಾನ್ಯ ಐಶ್ವರ್ಯಾದಿಗಳನ್ನು ದಯಪಾಲಿಸುವ ವ್ರತವೊಂದನ್ನು ಕೃಪೆ ಮಾಡಿ ತಿಳಿಸಿ ಎಂದು ಪ್ರಾರ್ಥಿಸಿದಳು.

ಮುಗುಳ್ನಕ್ಕು, ಕೇಳು ಪಾರ್ವತಿ “ಜೇಷ್ಠಾದೇವಿ ವ್ರತ” ಎಂಬ ವ್ರತವಿದೆ. ಇದನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಿದವರಿಗೆ ಕಷ್ಟ ಪರಿಹಾರವಾಗಿ, ಸೌಭಾಗ್ಯ ದೊರೆತು ಸುಖಿಗಳಾಗುತ್ತಾರೆ ಎಂದಾಗ. ಆ ವ್ರತಾಚರಣೆಯ ವಿಧಾನವ ನ್ನು ತಿಳಿಸಲು ಪ್ರಾರ್ಥಿಸಿದಾಗ, ‌ಭೂ ಲೋಕದಲ್ಲಿರುವ ಗಂಗಾ ತೀರದ ಋಷ್ಯಾಶ್ರ ಮವೊಂದಕ್ಕೆ ಹೋಗಿ ಅಲ್ಲಿ ವ್ರತ ಕಥೆ ವಿಧಿಯನ್ನು ತಿಳಿದು ಬರುವಂತೆ ಪಾರ್ವತಿಗೆ ಹೇಳಿದನು. ಶಿವನಾಜ್ಞೆಯಂತೆ ಭೂಲೋಕದ ಮುನಿಗಳ ಆಶ್ರಮಕ್ಕೆ ಬಂದು, ಜೇಷ್ಠಾದೇವಿ ವ್ರತಾಚರಣೆ ಬಗ್ಗೆ ಅವರನ್ನು ಕೇಳಿದಾಗ,‌ ಜೇಷ್ಠದೇವಿ ವ್ರತ ಕಥೆ‌ ಯನ್ನು ಮಹಾದೇವನೇ ಸೂತಪುರಾಣಕರಿಗೆ ತಿಳಿಸಿ ಅವರಿಂದ ಶೌನಕಾದಿಗಳ ಮೂಲಕ ನಮಗೆ ತಿಳಿಯಲ್ಪಟ್ಟಿತು ಅಂತಹ ಶ್ರೇಷ್ಠವಾದ ಜೇಷ್ಠಾ ಲಕ್ಷ್ಮಿ ವ್ರತ ಕಥೆ ಯನ್ನು ದೇವಿ ಪಾರ್ವತಿ ನಿಮಗೆ ಸಂತೋಷದಿಂದ ತಿಳಿಸುವೆ ಎಂದು ಆರಂಭಿಸಿದರು.

ಪ್ರತಿ ವರ್ಷ ಭಾದ್ರಪದ ಶುಕ್ಲ ಅಷ್ಟಮಿ ದಿವಸ ಜೇಷ್ಠಾ ನಕ್ಷತ್ರದಲ್ಲಿ ಈ ವ್ರತವನ್ನು ಮಾಡಬೇಕು. ಅನುರಾಧ ನಕ್ಷತ್ರದಲ್ಲಿ ಜೇಷ್ಠಾದೇವಿಯ ಆವಾಹನೆ- ಮೂಲಾ ನಕ್ಷತ್ರದಲ್ಲಿ ನಿಸರ್ಜನೆ ಮಾಡಬೇಕು. ವ್ರಥವನ್ನು ಮಾಡುವ ವಿಧಾನ ಹೇಗೆಂದರೆ,
ಲೋಹ ಅಥವಾ ಮಣ್ಣಿನ ಪಾತ್ರೆಯ ಹೊರ ಭಾಗದಲ್ಲಿ ಜೇಷ್ಠಾ ಗೌರಿಯ ಚಿತ್ರವನ್ನು ಶಂಕಚಕ್ರದೊಂದಿಗೆ ಬರೆಯಬೇಕು. ಈ ಮಣ್ಣಿನ ಮಡಿಕೆಯನ್ನು ಧಾನ್ಯ ಹರಡಿದ ಪೀಠದ ಮೇಲೆ ಇರಿಸಿ ಮಂಟಪ ನಿರ್ಮಾಣ ಮಾಡಿ ಅಲಂಕರಿಸಬೇಕು. ದೇವಿ ಯನ್ನು ಈ ಕಲಶದಲ್ಲಿ ಆವಾಹಿಸಿ ಹೊಸ ದಾರವನ್ನು ತೆಗೆದು ಅದರೊಳಗೆ ಹಾಕಬೇಕು. ಈ ದಾರ 48 ಅಂಗುಲ ಉದ್ದ ಹಾಗೂ 16 ಎಳೆಗಳು ಇರಬೇಕು.

ಅಂದು ಸ್ತ್ರೀಯರು ಮಂಗಳ ಸ್ನಾನ ಮಾಡಿ ಮಂಗಳದ್ರವ್ಯಗಳಿಂದ ಲಕ್ಷ್ಮಿಯ ಸಹೋದರಿಯಾದ ಜೇಷ್ಠಾದೇವಿಯನ್ನು ಪೂಜಿಸಬೇಕು. 16 ಗರಿಕೆ ಎಸಳನ್ನು ಅರ್ಪಿಸಬೇಕು ಅಪೋಪ (ಸಿಹಿ ಪಕ್ವಾನ್ನ) ಮುಂತಾದ ಭಕ್ಷಗಳನ್ನು ನೈವೇದ್ಯ ಮಾಡಿ, ದಾನ ಮಾಡಬೇಕು ನಂತರ ಭಕ್ಷಗಳನ್ನು ತಾನು ಸ್ವೀಕರಿಸಬೇಕು.
ಮರುದಿನ ಮತ್ತೆ ಮಹಾಲಕ್ಷ್ಮಿಯನ್ನು ಶೋಡ ಷೋಡಶೋಪಚಾರ ಪೂಜೆಗಳಿಂದ ಪೂಜಿಸಿ ದಾರವನ್ನು ಕೊರಳಲ್ಲಿ ಧರಿಸಬೇಕು. ಜೇಷ್ಠಾದೇವಿಯ ಈ ಕಥೆಯನ್ನು ಆಲಿಸುತ್ತಾ ದಾರವನ್ನು ಕಟ್ಟಿ ಕೊಳ್ಳಬೇಕು ಎಂಬುದಾಗಿ ಈ ಕುರಿತಾದ ಕಥೆ ಇದೆ.

ಹಿಂದೆ ಜಯವರ್ಧನ ಎಂಬ ನಗರದಲ್ಲಿ ಸುಭದ್ರನೆಂಬ ವಿದ್ಯಾ ವಿನಯ ಸಂಪನ್ನ ನಾದ ಒಬ್ಬ ಬ್ರಾಹ್ಮಣನಿದ್ದನು. ಈತನ ಪತಿ ಸುವ್ರತೆ. ಹೆಸರಿಗೆ ತಕ್ಕಂತೆ ಪತಿವ್ರತೆ ಯಾಗಿ ಬಾಳುತ್ತಿದ್ದಳು. ತುಂಬಾ ಬಡವರು. ಒಂದು ದಿನ ತನ್ನ ಪತಿಯಲ್ಲಿ ಸ್ವಾಮಿ ಈ ದಾರಿದ್ರ್ಯ ಸವೆಸುವುದು ಕಷ್ಟ ನಾವು ಬೇರೆ ಎಲ್ಲಾದರೂ ಹೋಗಿ ಬಾಳೋಣ ಎಂದಳು. ಅದೇ ರೀತಿ ಸತಿ ಪತಿಯರಿಬ್ಬರೂ ಬೇರೊಂದು ಕಾಡಿನಲ್ಲಿ ಆಶ್ರಮ ನಿರ್ಮಿಸಿ ವಾಸಿಸುತ್ತಿದ್ದರು.

ಒಮ್ಮೆ ಅರಣ್ಯದಲ್ಲಿ ನಡೆಯುತ್ತಿದ್ದಾಗ ದೂರದಲ್ಲಿ ಒಂದಷ್ಟು ಮಹಿಳೆಯರ ಸಮೂಹ ಕಂಡು ಅಲ್ಲಿಗೆ ಬಂದರು. ಆಗ ಸುವ್ರತೆ, ಅಲ್ಲಿ ಸುಹಾಸಿನಿಯರು ಯಾವುದೋ ಪೂಜೆ ಮಾಡುವುದನ್ನು ನೋಡಿ ಅವರ ಬಳಿ ಬಂದು ನಮಸ್ಕರಿಸಿ ಇಲ್ಲಿ ಯಾವ ಪೂಜೆ ಮಾಡುತ್ತಿದ್ದೀರಿ ಎಂದು ಕೇಳಿದಳು. ಅಮ್ಮ ನಾವು ಜೇಷ್ಠಾ ದೇವಿಯ ಪೂಜೆ ಮಾಡುತ್ತಿದ್ದೇವೆ ಇದು ಮಂಗಳ ಪ್ರದವಾದದ್ದು, ಈ ವ್ರತ ಮಾಡಿದರೆ, ದಾರಿದ್ರ್ಯ ನಾಶವಾಗಿ ಸಕಲ ಸೌಭಾಗ್ಯ, ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದರು.

ಸುವ್ರತೆ ಹೇಳಿದಳು, ನಾನು ಬಡವಳು, ನನ್ನ ಪತಿಯೊಡನೆ ಈ ವನಕ್ಕೆ ಬಂದಿದ್ದೆ, ಈ ವ್ರತ ವಿಧಾನ ನನಗೆ ತಿಳಿಯದು ಎಂದು, ವ್ರತ ಮಾಡಿಸುತ್ತಿದ್ದ ವಸಿಷ್ಠ ಮುನಿಗಳ ನ್ನು ಕೇಳಿದಳು. ವಸಿಷ್ಠರು, ಆಕೆಗೆ ಜೇಷ್ಠಾ ದೇವಿ ವ್ರಥ ಕತೆ ವಿಧಾನ ಸಂಕ್ಷಿಪ್ತವಾಗಿ ತಿಳಿಸಿದರು. ಅಂದು ಭಾದ್ರಪದ ಶುಕ್ಲ ಅಷ್ಟಮಿ ಜೇಷ್ಠಾ ನಕ್ಷತ್ರ ಆಗಿದ್ದು ಸುವ್ರತೆ ಅಲ್ಲೇ ಸರಳವಾಗಿ ಜೇಷ್ಠಾ ಲಕ್ಷ್ಮಿ ವ್ರತವನ್ನು ತನ್ನ ಶಕ್ತ್ಯಾನುಸಾರ ಶ್ರದ್ಧೆ- ಭಕ್ತಿಯಿಂದ ಮಾಡಿದಳು. ಅವಳು ವ್ರತಾಚರಣೆ ಮುಗಿಸಿ ತನ್ನ ಮನೆ ತಲುಪಿದಾಗ ಅವಳಿಗೆ ಆಶ್ಚರ್ಯ ಕಾದಿತ್ತು. ತಾನು ವಾಸವಿದ್ದ ಕುಟೀರದ ಜಾಗದಲ್ಲಿ ಧನ- ಕನಕ -ಧಾನ್ಯ ಗಳಿಂದ ತುಂಬಿದ ಅರಮನೆಯಂತಹ ಮನೆಯಿತ್ತು. ಇದನ್ನೆಲ್ಲಾ ನೋಡಿದ ಸುಭದ್ರ ಬ್ರಾಹ್ಮಣನಿಗೆ ಆತ್ಯಾಶ್ಚರ್ಯವಾಯಿತು. ನಡೆದ ಸಂಗತಿ ತಿಳಿದು ಆತನು ಆ ದಿನವೇ ಭೂರಿ ಭೋಜನವನ್ನು ಏರ್ಪಡಿಸಿದನು.

ಯಾವ ದೇವಿಯ ವ್ರತದಿಂದ ನಮಗೆ ಇಂತಹ ಭಾಗ್ಯ ಬಂದಿದ್ದು ಎನ್ನಲು ವಸಿಷ್ಠ ಮಹರ್ಷಿಗಳ ಉಪದೇಶದಂತೆ ತಾನು ಆಚರಿಸಿದ ಜೇಷ್ಠಾದೇವಿ ವ್ರತ ಮಹಿಮೆ ಯಿಂದ ಈ ಸಂಪತ್ತು ಬಂದಿದ್ದು ಎಂದು ಪತಿಗೆ ತಿಳಿಸಿದಳು. ಈ ವ್ರತದ ಮಹಿಮೆ ಯಿಂದ ಆ ದಂಪತಿಗಳಿಗೆ ಪುತ್ರ ಸಂತಾನವಾಯಿತು, ಸಂಪತ್ತು ಸೌಭಾಗ್ಯಗಳು ಹೆಚ್ಚಿದವು. ಈ ರೀತಿ ಜೇಷ್ಠಾ ಲಕ್ಷ್ಮೀ ವ್ರತ ಕತೆ ಆಚರಣೆ ರೂಢಿಗೆ ಬಂದಿತು.

ಜೇಷ್ಠಾ ದೇವಿ ಯಾರು?

ಇವಳ ಉತ್ಪತ್ತಿ ಹೇಗಾಯಿತು ಕೇಳಿದಾಗ, ವಸಿಷ್ಠ ಮಹರ್ಷಿಗಳು ಹೇಳಿದ್ದನ್ನೇ ತಿಳಿಸುತ್ತಾ, ‌ಜೇಷ್ಠ ಇವಳೂ ಲಕ್ಷ್ಮೀದೇವಿ, ಸಮುದ್ರ ಮಂಥನದ ಸಮಯದಲ್ಲಿ ಇಬ್ಬರು ಲಕ್ಷ್ಮಿಯರು ಬರುತ್ತಾರೆ ಅದರಲ್ಲಿ ಮೊದಲು ಕಾರ್ಕೋಟಕ ವಿಷದ ಜೊತೆ ಕಪ್ಪು ಬಟ್ಟೆ ಧರಿಸಿ ಕೂದಲನ್ನು ಕೆದರಿಕೊಂಡು ಕೈಯಲ್ಲಿ ಪೊರಕೆ ಹಿಡಿದು ಕೊಳಕಾದ ಒಬ್ಬ ಮಹಿಳೆ ಮೂದೇವಿ- ದರಿದ್ರ ದೇವತೆ- ಅನಿಷ್ಠ ಇಂಥ ಹೆಸರಿನ ಜೇಷ್ಠಾ ಲಕ್ಷ್ಮಿ ಎಂದು ಕರೆಯುವ ಇವಳು ಮೊದಲು ಬಂದಳು. ಇವಳ ಹಿಂದೆ ಬಂದವಳು ಅದೃಷ್ಟ ಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ, ಶ್ರೀ ಲಕ್ಷ್ಮಿ, ಕನಕಲಕ್ಷ್ಮಿ, ಎಂದೆಲ್ಲ ಕರೆವ ಮಹಾಲಕ್ಷ್ಮಿ ದೇವಿ. ಇವಳನ್ನು ಮಹಾವಿಷ್ಣು ವರಿಸಿ ಮಹಾಲಕ್ಷ್ಮಿಯಾಗುತ್ತಾಳೆ.

ಕಾರ್ಕೋಟಕದ ಜೊತೆ ಬಂದ ಜೇಷ್ಠಾ ದೇವಿ ಮಹಾದೇವನ ಬಳಿ ಬಂದು, ನನ್ನ ಜೊತೆ ಬಂದ ಕಾರ್ಕೋಟಕವನ್ನು ನೀವು ಸ್ವೀಕರಿಸಿದರಿ, ಆದರೆ ನಾನು ಎಲ್ಲಿಗೆ ಹೋಗಲಿ, ಇಲ್ಲಿ ನನ್ನ ಕೆಲಸ ಏನು ಎಂದು ಕೇಳಿದಳು. ಆಗಿನ್ನೂ ವಿಷ ಸೇವಿಸಿ ಅದರ ತಾಪದಲ್ಲಿದ್ದ ಶಿವನು ಜೇಷ್ಠ ಲಕ್ಷ್ಮಿಗೆ ನೀನು ದೂರದಲ್ಲಿ ಎಲ್ಲಾದರೂ ಕಸ ತುಂಬಿದ ಮೂಲೆಯಲ್ಲಿ ನಿನ್ನ ವಾಸ ಮಾಡಿಕೊಂಡು ಅಲ್ಲಿಂದಲೇ ದುಷ್ಟತನ ಆಕ್ರೋಶಗಳನ್ನು ತೋರಿಸು ಎಂದನು. ಶಿವ ಹೇಳಿದ್ದು ಅವಳಿಗೆ ಅರ್ಥವಾಗಲಿಲ್ಲ. ಅವಳು ವಿಷ್ಣುವಿನ ಬಳಿ ಹೋಗಿ, ಮಹಾದೇವ ಹೇಳಿದನ್ನೆ ಅವನಿಗೂ ಹೇಳಿ, ಇದಕ್ಕೆ ನೀವು ಏನು ಹೇಳುವಿರಿ ಎಂದಳು.ಕೂರ್ಮ ರೂಪದಿಂದ ವಿಷ್ಣು ಪ್ರತ್ಯಕ್ಷ ನಾಗಿ ನೋಡು ಇನ್ನು ಮುಂದೆ ನಿನ್ನ ಹೆಸರು “ದರಿದ್ರ ಲಕ್ಷ್ಮಿ- ಜೇಷ್ಠಾ ಲಕ್ಷ್ಮಿ” ಎಂದು. ಮಹಾದೇವ ಹೇಳಿದಂತೆ, ಕತ್ತಲೆ, ಕಲಹ, ಕೊಳಕು, ಸುಳ್ಳು, ಮೋಸ ಅಧರ್ಮ, ವಂಚನೆ, ಕೂಗಾಟ, ಬೈಗುಳ, ಅಶುಚಿ, ದುರ್ಗಂಧ ಅಶುಭ, ಅಮಂಗಳವಿರುವೆಡೆ ನಿನ್ನ ವಾಸವಾಗಲಿ. ಆ ವ್ಯಾಪ್ತಿಯ ಸುತ್ತ ನಿನ್ನ ಛಾಯೆ ವ್ಯಾಪಿಸಿರಲಿ ಇಂಥ ಎಲ್ಲಾ ಸ್ಥಳಗಳೂ ನಿನ್ನದೇ ಆಗಿರುತ್ತದೆ ಎಂದನು.

ಇನ್ನೊಂದು ಪುರಾಣದ ಪ್ರಕಾರ ಜಗತ್ತನ್ನು ಸೃಷ್ಟಿ ಮಾಡುವಾಗ, ಭೂಮಿಯನ್ನು ಭಗವಂತ 2 ಸಮಭಾಗ ಮಾಡಿ ಒಂದರಲ್ಲಿ ಕೆಟ್ಟದ್ದನ್ನೂ, ಮತ್ತೊಂದು ಭಾಗದಲ್ಲಿ
ಒಳ್ಳೆಯದನ್ನು ತುಂಬಿದ್ದನು. ಸಮುದ್ರ ಮಂಥನದಲ್ಲಿ ಮೊದಲು ವಿಷ ಬಂದು ನಂತರ ಹಲವು ರತ್ನಗಳು, ಕುದುರೆ ಆನೆ ಇವೆಲ್ಲ ಬಂದವು. ಸ್ವಲ್ಪ ಸಮಯದಲ್ಲಿ ಅಶುಭ ಲಕ್ಷಣದ ದೇವಿ ಪ್ರತ್ಯಕ್ಷವಾದಳು. ಅವಳೇ #ಜೇಷ್ಠಾ #ಲಕ್ಷ್ಮಿ. ಕೆಲ ಹೊತ್ತಿಗೆ ಪ್ರಕಾಶಮಾನವಾದ ಐಶ್ವರ್ಯ ದೇವತೆ ಹೊರ ಬಂದಳು ಅವಳೇ ಶ್ರೀ ಲಕ್ಷ್ಮಿ. ದೇವತೆಗಳು ಇವಳನ್ನು ಸ್ವೀಕರಿಸಿದರು. ಮಹಾವಿಷ್ಣುವಿಗೆ ಪತ್ನಿಯಾದಳು. ಜೇಷ್ಠಾ ಲಕ್ಷ್ಮಿಯನ್ನು ಅಶುಭ ಎಂದು ಪರಿಗಣಿಸಿ ದೇವತೆಗಳು ಸ್ವೀಕರಿಸಲಿಲ್ಲ. ಆಗ ತಪಸ್ವಿಯಾದ “ದುಸ್ಸಹ” ಎಂಬ ಋಷಿಗೆ ಸ್ವೀಕರಿಸುವಂತೆ ಶಿವ ಮತ್ತು ವಿಷ್ಣು ಹೇಳಿ ವಿವಾಹ ಮಾಡಿಸಿದರು.ಈ ಲೇಖನ ಬರಹಗಾರರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564

ವಿವಾಹದ ನಂತರ ಋಷಿ ದುಸ್ಸಹ ಪತ್ನಿಗೆ ಕೇಳಿದ ನೀನು ಯಾವ ಸ್ಥಳದಲ್ಲಿ ವಾಸಿಸಬೇಕು ಎಂದು, ಆಕೆ ಜಗಳವಾಗುವ, ಅಶುದ್ಧವಾದ, ಹಿರಿಯರನ್ನು ಗೌರವಿಸದ, ಧರ್ಮ, ಭಕ್ತಿ, ಶ್ರದ್ಧೆ, ಇಲ್ಲದ ಸುಳ್ಳು- ಮೋಸ ಇರುವ ಮನೆಗಳಲ್ಲಿ ವಾಸಿಸುತ್ತೇನೆ ಎಂದಳು. ಮತ್ತು ಅಂಥ ಸ್ಥಳಗಳಲ್ಲಿ ಪತಿ ದುಸ್ಸಹ ನನ್ನು ಓಡಾಡಿಸು ತ್ತಿದ್ದಳು. ಬೇಸರಗೊಂಡ ದುಸ್ಸಹ ವಿಷ್ಣುವಿನಲ್ಲಿ ಹೇಳಿದ.‌ ವಿಷ್ಣು ಒಂದು ಉಪಾ ಯ ಹೇಳಿದ ಅವಳನ್ನು ಅವಳು ಇಷ್ಟಪಡುವ ಸ್ಥಳದಲ್ಲಿ ಬಿಟ್ಟು, ನಿನ್ನ ಪಾಡಿಗೆ ನೀನು ತಪಸ್ಸಿಗೆ ಹೋಗು ಎಂದನು. ದುಸ್ಸಹ ಜೇಷ್ಠಾ ಲಕ್ಷ್ಮಿಯನ್ನು ಒಂದು ಆಲದ ಮರದ ಕಟ್ಟೆ ಮೇಲೆ ಕೂರಿಸಿ ಈಗ ಬರುತ್ತೇನೆ ಎಂದು ಹೇಳಿ ಹೋದವನು ಮತ್ತೆ ಎಂದಿಗೂ ಬರಲಿಲ್ಲ.

ಜೇಷ್ಠಾ ಲಕ್ಷ್ಮಿ ಲಕ್ಷ್ಮಿ ವ್ರತ ಪೂಜೆ ಪುರಾಣ ಕಥೆಗಳಿಂದ ಬಂದಿದೆ. ಈ ವ್ರತ ಮಾಡುವ ಉದ್ದೇಶ ಮನೆಯಲ್ಲಿ ದಾರಿದ್ರ ಕಲಹ ಇರಬಾರದು, ಮಹಾಲಕ್ಷ್ಮಿಯ ಕೃಪೆ ಇರಲಿ ಕುಟುಂಬದಲ್ಲಿ ಐಶ್ವರ್ಯ ಶಾಂತಿ ಎಂಬ ಕಾರಣದಿಂದ, ಜೇಷ್ಠಾ ಲಕ್ಷ್ಮಿಗೆ ನೀನು ಕೋಪಗೊಳ್ಳಬೇಡ, ನಮ್ಮ ಮನೆಯಲ್ಲಿ ಕಲಹ ತರಬೇಡ ಎಂದು ಪ್ರಾರ್ಥಿಸುತ್ತಾರೆ.
ಬಹಳ ಹಿಂದೆ ಜನರು ಮನೆಗಳನ್ನು ಅಶುದ್ಧವಾಗಿಟ್ಟುಕೊಂಡು ಜಗಳ ಮಾಡುತ್ತಿದ್ದರು ಆದ್ದರಿಂದ ಜೇಷ್ಠ ಲಕ್ಷ್ಮಿ ಆ ಮನೆಗಳಲ್ಲಿ ಬಾಸ ಮಾಡುತ್ತಿದ್ದಳು ಎಂಬ ನಂಬಿಕೆ ಇತ್ತು ಯಾವಾಗ ಸ್ವಚ್ಛತೆ ಶಾಂತಿ ಧರ್ಮ ಇರುವ ಮನೆಗಳಿಗೆ ಮಹಾಲಕ್ಷ್ಮಿ ಬರುತ್ತಾಳೆ ಎಂದು ಹಿರಿಯರು ಮಕ್ಕಳಿಗೆ ತಿಳಿಸಲು, ಜೇಷ್ಠ ಲಕ್ಷ್ಮಿಯನ್ನು ಪೂಜೆ ಮಾಡಿ ಶಾಂತಗೊಳಿಸಿ ಅವಳನ್ನು ನಿಸರ್ಜಿಸಿ ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಉದ್ದೇಶ ಜೇಷ್ಠ ಲಕ್ಷ್ಮಿ ಯನ್ನು ಶಾಂತಗೊಳಿಸಲು ವ್ರತವನ್ನು ಮಾಡುತ್ತಾರೆ.

ಪೃಥ್ವೀತ್ವಯಾ ಧೃತಾ
ಲೋಕಾ ದೇವಿ ತ್ವಾಂ
ವಿಷ್ಣುನಾ ಧೃತಾ!
ತ್ವಂಚ ಧಾರಯ ಮಾಂ
ದೇವಿ ಪವಿತ್ರಂ ಕುರುಚಾಸನಂ!!
ಶ್ರೀ ಅನಂತಾಸನಾಯ ನಮಃ
ಶ್ರೀ ಕೂರ್ಮಾಸನಾಯ ನಮಃ
ಓಂ ಲಂ ಪೃಥ್ವಿವ್ಯೈ ನಮಃ
ಓಂ ಭೂರ್ಭುವಸ್ವರೋಮ್
ಇದಮಾಸನಂ!!

Share. Facebook Twitter LinkedIn WhatsApp Email

Related Posts

ALERT : ಹೋಟೆಲ್, ಟೀ ಅಂಗಡಿಯಲ್ಲಿ ‘ಮನೆ ಗ್ಯಾಸ್’ ಬಳಸುವವರೇ ಎಚ್ಚರ : ರಾಜ್ಯಾದ್ಯಂತ `ಅಗತ್ಯ ವಸ್ತುಗಳ ಕಾಯ್ದೆ ಅಡಿ’ 316 ಕೇಸ್ ದಾಖಲು !

15/03/2026 11:30 AM1 Min Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ಮುಂದೆ `ಜಾತಿ ಮತ್ತು ಆದಾಯ ಪ್ರಮಾಣ ಪತ್ರ’ ಲಭ್ಯ !

15/03/2026 11:26 AM1 Min Read

ಮನಿ ಡಬ್ಲಿಂಗ್ ಕೇಸ್ ನಲ್ಲಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಅರೆಸ್ಟ್!

15/03/2026 11:07 AM1 Min Read
Recent News

ALERT : ಹೋಟೆಲ್, ಟೀ ಅಂಗಡಿಯಲ್ಲಿ ‘ಮನೆ ಗ್ಯಾಸ್’ ಬಳಸುವವರೇ ಎಚ್ಚರ : ರಾಜ್ಯಾದ್ಯಂತ `ಅಗತ್ಯ ವಸ್ತುಗಳ ಕಾಯ್ದೆ ಅಡಿ’ 316 ಕೇಸ್ ದಾಖಲು !

15/03/2026 11:30 AM

(ಜೇಷ್ಠಾ ಲಕ್ಷ್ಮಿ) ದರಿದ್ರ ಲಕ್ಷ್ಮೀ ಹೋಗಿ ಸೌಭಾಗ್ಯ ಲಕ್ಷ್ಮಿ ಮನೆಯಲ್ಲಿ ನೆಲೆಸುವ ಸೂತ್ರ..!!

15/03/2026 11:29 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ಮುಂದೆ `ಜಾತಿ ಮತ್ತು ಆದಾಯ ಪ್ರಮಾಣ ಪತ್ರ’ ಲಭ್ಯ !

15/03/2026 11:26 AM

ಮನಿ ಡಬ್ಲಿಂಗ್ ಕೇಸ್ ನಲ್ಲಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಅರೆಸ್ಟ್!

15/03/2026 11:07 AM
State News
KARNATAKA

ALERT : ಹೋಟೆಲ್, ಟೀ ಅಂಗಡಿಯಲ್ಲಿ ‘ಮನೆ ಗ್ಯಾಸ್’ ಬಳಸುವವರೇ ಎಚ್ಚರ : ರಾಜ್ಯಾದ್ಯಂತ `ಅಗತ್ಯ ವಸ್ತುಗಳ ಕಾಯ್ದೆ ಅಡಿ’ 316 ಕೇಸ್ ದಾಖಲು !

By kannadanewsnow5715/03/2026 11:30 AM KARNATAKA 1 Min Read

ಬೆಂಗಳೂರು: ನೀವು ಹೋಟೆಲ್, ಕೆಫೆ ಅಥವಾ ಟೀ ಅಂಗಡಿ ನಡೆಸುತ್ತಿದ್ದೀರಾ? ಲಾಭದ ಆಸೆಗೆ ಬಿದ್ದು ಗೃಹಬಳಕೆಯ (Domestic) ಗ್ಯಾಸ್ ಸಿಲಿಂಡರ್‌ಗಳನ್ನು…

(ಜೇಷ್ಠಾ ಲಕ್ಷ್ಮಿ) ದರಿದ್ರ ಲಕ್ಷ್ಮೀ ಹೋಗಿ ಸೌಭಾಗ್ಯ ಲಕ್ಷ್ಮಿ ಮನೆಯಲ್ಲಿ ನೆಲೆಸುವ ಸೂತ್ರ..!!

15/03/2026 11:29 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ಮುಂದೆ `ಜಾತಿ ಮತ್ತು ಆದಾಯ ಪ್ರಮಾಣ ಪತ್ರ’ ಲಭ್ಯ !

15/03/2026 11:26 AM

ಮನಿ ಡಬ್ಲಿಂಗ್ ಕೇಸ್ ನಲ್ಲಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಚಿತ್ರದುರ್ಗ ನಗರ ಸಭೆ ಮಾಜಿ ಸದಸ್ಯ ಅರೆಸ್ಟ್!

15/03/2026 11:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.