ನವದೆಹಲಿ: ಸುಪ್ರಿಂ ಕೋರ್ಟ್ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಇಂದು ಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೇ 13, 2016 ರಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಉನ್ನತೀಕರಿಸಲ್ಪಟ್ಟ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಿಜೆಐ ಆಗಿ ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಮತ್ತು ನವೆಂಬರ್ 10, 2024 ರಂದು ನಿವೃತ್ತರಾಗಲಿದ್ದಾರೆ.
ಮುಖ್ಯ ನ್ಯಾಯಮೂರ್ತಿಯಾಗಿದ್ದ ಉದಯ್ ಉಮೇಶ್ ಲಲಿತ್ ಅವರು ಅಕ್ಟೋಬರ್ 11 ರಂದು ತನ್ನ ಉತ್ತರಾಧಿಕಾರಿಯಾಗಿ ಚಂದ್ರಚೂಡ್ ಅವರ ಹೆಸರನ್ನು ಸೂಚಿಸಿದ್ದರು. ಯುಯು ಲಲಿತ್ ನಿವೃತ್ತಿಯಿಂದ ತೆರವಾಗಿದ್ದು, ಆ ಸ್ಥಾನವನ್ನು ಚಂದ್ರಚೂಡ್ ಅಲಂಕರಿಸಲಿದ್ದಾರೆ.
ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಚಂದ್ರಚೂಡ್ ಅವರ ತಂದೆ ವೈವಿ ಚಂದ್ರಚೂಡ್ ಕೂಡ ಭಾರತದ ಮುಖ್ಯ ನ್ಯಾಯಮೂರ್ತಿ (CJI)ಯಾಗಿ ಫೆಬ್ರವರಿ 22, 1978 ರಿಂದ ಜುಲೈ 11, 1985 ರವರೆಗೆ ಸೇವೆ ಸಲ್ಲಿಸಿದ್ದಾರೆ.
BIG NEWS: ʻಫೇಸ್ಬುಕ್ʼ ಉದ್ಯೋಗಿಗಳಿಗೂ ಎದುರಾದ ಸಂಕಷ್ಟ: ಉದ್ಯೋಗ ಕಡಿತಕ್ಕೆ ಕಂಪನಿ ಬಿಗ್ ಪ್ಲಾನ್? | Facebook