ಶಿವಮೊಗ್ಗ : ಶಿವಮೊಗ್ಗ ಅಪರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕ ಮಾಡಲು 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರುವ ನ್ಯಾಯವಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ (ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ನ್ಯಾಯವಾದಿಯಾಗಿ ನೋಂದಣಿ ಆಗಿರುವ ಬಗ್ಗೆ ನೋಂದಣಿ ಸಂಖ್ಯೆಯೊಂದಿಗೆ ವಿವರ, ಇತ್ಯಾದಿ) ಅರ್ಜಿ ಸಿದ್ದಪಡಿಸಿ ಜುಲೈ 23 ರ ಸಂಜೆ 05 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಯನ್ನು ಕಚೇರಿಯ ಸಮಯದಲ್ಲಿ ನ್ಯಾಯಾಂಗ ಶಾಖೆಯನ್ನು ಖುದ್ದಾಗಿ ಹಾಗೂ ದೂರವಾಣಿ ಸಂಖ್ಯೆ: 08182-221100/221010 -9110642146 ರಲ್ಲಿ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಶಿವಮೊಗ್ಗ ತಿಳಿಸಿದ್ದಾರೆ.
ದೇಶಾದ್ಯಂತ ‘HMT’ ಭೂಮಿ ಒತ್ತುವರಿ ತೆರವಿಗೆ ಕ್ರಮ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
‘ರಾಮನಗರ ಜಿಲ್ಲೆ’ಯನ್ನು ಮರುನಾಮಕರಣ ಮಾಡಬೇಡಿ: ಸಿಎಂಗೆ ‘ಸಂಸದ ಡಾ.ಸಿಎನ್ ಮಂಜುನಾಥ್’ ಪತ್ರ