Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆದಾಯ ತೆರಿಗೆ ಪಾವತಿದಾರರೇ ಗಮನಿಸಿ : ಏನಿದು ಫಾರ್ಮ್ 143? ಯಾರಿಗೆ ಅನ್ವಯ? ತಿಳಿಯಿರಿ

16/04/2026 9:45 AM

ಹೂಡಿಕೆದಾರ ನಾಮಿನಿ ಇಲ್ಲದೆ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹಣ ಏನಾಗುತ್ತದೆ? ಇಲ್ಲಿದೆ ವಿವರ

16/04/2026 9:37 AM

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತ್ರಕರ್ತ ಮಹೇಶ್ ಹೆಗೆಡೆಗೆ ಜೀವ ಬೆದರಿಕೆ, ಹಲ್ಲೆಗೆ ಯತ್ನ: ರವೀಂದ್ರ ಕಾಮತ್, ಪ್ರದೀಪ್ ವಿರುದ್ಧ ಕ್ರಮಕ್ಕೆ ಡಿವೈಎಸ್ಪಿಗೆ ಮನವಿ
KARNATAKA

ಪತ್ರಕರ್ತ ಮಹೇಶ್ ಹೆಗೆಡೆಗೆ ಜೀವ ಬೆದರಿಕೆ, ಹಲ್ಲೆಗೆ ಯತ್ನ: ರವೀಂದ್ರ ಕಾಮತ್, ಪ್ರದೀಪ್ ವಿರುದ್ಧ ಕ್ರಮಕ್ಕೆ ಡಿವೈಎಸ್ಪಿಗೆ ಮನವಿ

By kannadanewsnow0931/05/2025 6:15 PM

ಬೆಂಗಳೂರು: : ಸಾಗರದ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಪತ್ರಕರ್ತ ಮಹೇಶ್ ಹೆಗಡೆ ಅವರಿಗೆ ಜೀವ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ ರಿಯಲ್ ಎಸ್ಟೆಟ್ ಉದ್ಯಮಿ ರವೀಂದ್ರ ಕಾಮತ್ ಮತ್ತು ಪ್ರದೀಪ್ ಎಂಬುವವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿವೈಎಸ್‌ಪಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನ್ಯೂ ಬಿ.ಎಚ್.ರಸ್ತೆಯ ಸ್ವಾತಿ ವೆಜ್ ಹೋಟೆಲ್‌ಗೆ ಶನಿವಾರ ಮಹೇಶ್ ಹೆಗಡೆ ಅವರು ತಮ್ಮ ಸ್ನೇಹಿತರ ಜೊತೆ ಹೋಗಿದ್ದಾಗ ರವೀಂದ್ರ ಕಾಮತ್, ಪ್ರದೀಪ್ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ.

ಸಾಗರ ತಾಲ್ಲೂಕು ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಮಹೇಶ್ ಹೆಗಡೆ ಅಕ್ರಮ ಜಮೀನು ಒತ್ತುವರಿ ಸೇರಿದಂತೆ ಬೇರೆಬೇರೆ ವಿಷಯಗಳ ಕುರಿತು ನಿಷ್ಪಕ್ಷಪಾತವಾಗಿ ವರದಿ ಮಾಡುತ್ತಿದ್ದಾರೆ. ರಿಯಲ್ ಎಸ್ಟೆಟ್ ದಂಧೆ ನಡೆಸುತ್ತಿರುವ ರವೀಂದ್ರ ಕಾಮತ್ ಮತ್ತು ವಿಜಯೇಂದ್ರ ನಮ್ಮ ವಿರುದ್ದ ಸುದ್ದಿ ಬರೆಯುತ್ತೀಯಾ, ನಿನ್ನನ್ನು ಮುಗಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

ವಸ್ತುನಿಷ್ಟವಾಗಿ ವರದಿ ಮಾಡುವುದು ಪತ್ರಕರ್ತರ ಆದ್ಯ ಕರ್ತವ್ಯ. ಆದರೆ ತಮ್ಮ ವಿರುದ್ದವೇ ಸುದ್ದಿ ಮಾಡುತ್ತಿದ್ದಾರೆ ಎಂದು ಭಾವಿಸಿ ಹಲ್ಲೆ ಮಾಡುವುದು, ಜೀವ ಬೆದರಿಕೆ ಹಾಕುವುದನ್ನು ಸಂಘವು ತೀವೃವಾಗಿ ಖಂಡಿಸುತ್ತದೆ. ಇದರಿಂದ ಪ್ರಾಮಾಣಿಕವಾಗಿ ವರದಿ ಮಾಡಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಹೇಶ್ ಹೆಗಡೆ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ರವೀಂದ್ರ ಕಾಮತ್ ಮತ್ತು ಪ್ರದೀಪ್ ಅವರ ವಿರುದ್ದ ಈಗಾಗಲೇ ಸಾಕಷ್ಟು ಹಗರಣಗಳ ಆರೋಪವಿದೆ. ಪತ್ರಕರ್ತರಾಗಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಮಹೇಶ್ ಹೆಗಡೆ ಅವರ ಮೇಲೆ ಹಲ್ಲೆ ನಡೆಸಿ, ಅಶ್ಲೀಲ ಪದ ಬಳಸಿ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಕ್ರಮ ಖಂಡನೀಯ. ತಕ್ಷಣ ರವೀಂದ್ರ ಕಾಮತ್ ಮತ್ತು ಪ್ರದೀಪ್ ಅವರನ್ನು ಬಂಧಿಸಿ, ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಮಹೇಶ್ ಹೆಗಡೆ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ನಾಗೇಶ್, ಉಪಾಧ್ಯಕ್ಷ ಲೋಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಖಜಾಂಚಿ ಎಂ.ಜಿ.ರಾಘವನ್, ಪತ್ರಕರ್ತರಾದ ಎಂ.ರಾಘವೇಂದ್ರ, ಇಮ್ರಾನ್ ಸಾಗರ್, ಗಿರೀಶ್ ರಾಯ್ಕರ್, ಜಮೀಲ್ ಸಾಗರ್, ನಾಗರಾಜ್, ರಫೀಕ್ ಕೊಪ್ಪ, ಸತ್ಯನಾರಾಯಣ, ವಸಂತ ಬಿ ಈಶ್ವರಗೆರೆ ಹಾಜರಿದ್ದರು.

BREAKING: ಲಿಫ್ಟ್ ನಲ್ಲಿ ಸಿಲುಕಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರದಾಟ

SHOCKING : ಚಾಮರಾಜನಗರ : ಕಾಂಪೌಂಡ್‌ ಸರಳಿಗೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!

ಕುರಿಗಾಹಿಗಳಿಗೆ ಬಂದೂಕು ನೀಡೋದು ಸಮರ್ಪಕಗೊಳಿಸಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Share. Facebook Twitter LinkedIn WhatsApp Email

Related Posts

ಹೂಡಿಕೆದಾರ ನಾಮಿನಿ ಇಲ್ಲದೆ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹಣ ಏನಾಗುತ್ತದೆ? ಇಲ್ಲಿದೆ ವಿವರ

16/04/2026 9:37 AM2 Mins Read

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM2 Mins Read

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

16/04/2026 9:14 AM2 Mins Read
Recent News

ಆದಾಯ ತೆರಿಗೆ ಪಾವತಿದಾರರೇ ಗಮನಿಸಿ : ಏನಿದು ಫಾರ್ಮ್ 143? ಯಾರಿಗೆ ಅನ್ವಯ? ತಿಳಿಯಿರಿ

16/04/2026 9:45 AM

ಹೂಡಿಕೆದಾರ ನಾಮಿನಿ ಇಲ್ಲದೆ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹಣ ಏನಾಗುತ್ತದೆ? ಇಲ್ಲಿದೆ ವಿವರ

16/04/2026 9:37 AM

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM

ಹೊಸ ಕ್ಷೇತ್ರ ಪುನರ್ವಿಂಗಡಣೆ ಬಿಲ್: ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಸೀಟು ಮೀಸಲು; ಕೇಂದ್ರ ಸರ್ಕಾರದ ಐತಿಹಾಸಿಕ ಹೆಜ್ಜೆ!

16/04/2026 9:27 AM
State News
KARNATAKA

ಹೂಡಿಕೆದಾರ ನಾಮಿನಿ ಇಲ್ಲದೆ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹಣ ಏನಾಗುತ್ತದೆ? ಇಲ್ಲಿದೆ ವಿವರ

By kannadanewsnow5716/04/2026 9:37 AM KARNATAKA 2 Mins Read

ಬ್ಯಾಂಕ್ ಖಾತೆ, ಎಫ್‌ಡಿ ಅಥವಾ ಮ್ಯೂಚುವಲ್ ಫಂಡ್ ಹೀಗೆ ಯಾವುದೇ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ‘ನಾಮಿನಿ’ (ವಾರಸುದಾರರು) ಹೆಸರನ್ನು…

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

16/04/2026 9:14 AM

SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!

16/04/2026 9:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.