ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಕ್ಕೆ ಲಾಭ ಆಗಿದೆ ನಾನು ಹೋಗಿದ್ದಕ್ಕೆ ಕಾಂಗ್ರೆಸ್ಗೆ ಲಾಸ್ ಆಗಿಲ್ಲ ಇದು ಅವರಿಗೂ ಗೊತ್ತಿರುವ ವಿಷಯವಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದಕ್ಕೆ ಅವರಿಗೆ ಲಾಭ ಆಗಿದೆ ನಾನು ಹೋಗಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿ ಲಾಸ್ ಆಗಿಲ್ಲ ಅದು ಅವರಿಗೂ ಗೊತ್ತಿರುವ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ನಾನು ಯಾವುದೇ ರೀತಿಯಾಗಿ ಕಾಂಗ್ರೆಸ್ ಗೆ ನಷ್ಟ ಮಾಡಿ ಹೋಗಿಲ್ಲ ಬಿಜೆಪಿಗೆ ಬರಬೇಕು ಅನ್ನೋದು ಕಾರ್ಯಕರ್ತರು ಆಸೆಯಾಗಿತ್ತು ದೇಶಕ್ಕೆ ನರೇಂದ್ರ ಮೋದಿಯ ಅಗತ್ಯವಿದೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಈ ಕಾರಣದಿಂದ ನಾನು ಮತ್ತೆ ಬಿಜೆಪಿಗೆ ಸೇರಿಕೊಂಡಿದ್ದೇನೆ ಎಂದು ತಿಳಿಸಿದರು.ವರಿಷ್ಠರು ರಾಜ ನಾಯಕರು ಬೇಡ ಅಂದಿದ್ದರೆ ಬರುತ್ತಿರಲಿಲ್ಲ ಕಾಂಗ್ರೆಸ್ ಗೆ ಹೋದಾಗ ಬದಲಾವಣೆ ಆಯ್ತು ಅವರಿಗೆ ಗೊತ್ತು.ಕಾರ್ಯಕರ್ತರ ಒಂದು ತಳಮಳ ನೀವು ನಮ್ಮ ಜೊತೆಗಿರಬೇಕೆಂಬ ನಾನು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಕ್ಕೆ ನನಗೆ ಯಾವುದೇ ರೀತಿ ಮುಜುಗರ ಆಗಿಲ್ಲ ಎಂದು ತಿಳಿಸಿದರು.
ಬಿಜೆಪಿ ನನ್ನ ಮನೆ ಅಲ್ಲಿಂದ ನಾನು ಹೊರ ಬಂದಿದ್ದೆ ನನ್ನ ಬಗ್ಗೆ ಅನುಕಂಪ ತೋರಿಸಿದರೆ ನಾನು ಬಿಜೆಪಿಯಿಂದ ಬರುತ್ತಿರಲಿಲ್ಲ. ಕಳೆದ ಒಂದುವರೆ ತಿಂಗಳಿನಿಂದ ನನ್ನನ್ನು ಬಿಜೆಪಿಗೆ ತಿಳಿದುಕೊಳ್ಳಲು ಪ್ರಯತ್ನ ನಡೆದಿದೆ ಪಕ್ಷದಲ್ಲಿ ವಿಜಯೇಂದ್ರ ಬಿ ಎಸ್ ವೈ ಮುನ್ನೆಲಗೆ ಬಂದ್ರು ಈ ಬೆಳವಣಿಗೆ ಬೆನ್ನಲ್ಲೇ ನೆನ್ನೆ ಇದು ಫಲಪ್ರದವಾಗಿದೆ ಎಂದು ಅವರು ತಿಳಿಸಿದರು.ಬಿಜೆಪಿ ನಾಯಕರು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದರು. ಬಿಜೆಪಿಗೆ ಬರಬೇಕು ಅನ್ನೋದು ಕಾರ್ಯಕರ್ತರ ಒತ್ತಾಯವಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ಕೂಡ ನಾನು ಅವರಿಗೆ ಒತ್ತಡ ಹೇಳಿಲ್ಲ ನನಗೆ ಆಸ್ಥಾನ ನೀಡಿ ಈ ಸ್ಥಾನ ನೀಡಿ ಎಂದು ಅವರ ಮೇಲೆ ಒತ್ತಡ ಹೇರಿಲ್ಲ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕು ಅಂತ ನನಗೆ ಇರಲಿಲ್ಲ ನನಗೆ ಚುನಾವಣೆಗೆ ನಿಲ್ಲಬೇಕು ಅನ್ನೋ ಹಠ ಕೂಡ ಇಲ್ಲ ನನ್ನ ನನ್ನ ಸ್ಪರ್ಧೆ ಬಗ್ಗೆ ಸಿಎಂ ಕೂಡ ಹೇಳಿದ್ರು ಆದರೆ ನಾನೇ ಬೇಡ ಅಂತ ತಿಳಿಸಿದ್ದೆ ಎಂದು ಅವರು ತಿಳಿಸಿದರು. ರಾಮ ಮಂದಿರಕ್ಕೂ ರಾಜಕಾರಣಕ್ಕೂ ತಳಕು ಹಾಕುವಂತಿಲ್ಲ ಇಂದು ಬಿಜೆಪಿಗೆ ಬಂದಿದ್ದರು ಈ ಮಾತನ್ನ ಹೇಳುತ್ತೇನೆ. ರಾಮ ಮಂದಿರ ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ ಅಲ್ಲದೆ ರಾಮಮಂದಿರ ನಿರ್ಮಾಣಕ್ಕೂ ಕೂಡ ದೇಣಿಕೆಗಳನ್ನು ನೀಡಿದ್ದೇನೆ ರಾಜಕಾರಣದಲ್ಲಿ ನಿರ್ಧಾರಗಳು ದಿಢೀರ ಆಗಿ ಆಗೋದಿಲ್ಲ ಎಂದರು.