ಚಿತ್ರದುರ್ಗ : ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ತಿಂಗಳ ನವೆಂಬರ್ 4ರಂದು ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕಲರ್ಸ್ ಟೆಕ್ನಾಲಜಿ ಕಂಪನಿಯು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ, ಜಿಲ್ಲಾ ಪ್ರೋಗ್ರಾಂ ಟೆಲಿಕಾಲರ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ, ಫೋಟೋ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಸಂದರ್ಶನಕ್ಕೆ ಬರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 7022459064, 8310785143, 8105619020ಕ್ಕೆ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.
BIG NEWS: ಭಾರತ-ಚೀನಾ ಗಡಿ ಕಾಯೋ ಯೋಧರಿಗೆ ಶಸ್ತ್ರಗಳಿಲ್ಲದೇ ಹೋರಾಡುವ ತರಬೇತಿ, ಗಸ್ತು ವೇಳೆ ಬಂದೂಕಿಗಿಲ್ಲ ಅವಕಾಶ
‘ನಮ್ಮ ಮೆಟ್ರೋ’ ಆನ್ ಲೈನ್ ಟಿಕೆಟ್ ಗೆ ಭರ್ಜರಿ ರೆಸ್ಪಾನ್ಸ್ : ಮೊದಲ ದಿನವೇ 1,669 ಟಿಕೆಟ್ ಮಾರಾಟ |Namma Metro