ಮಡಿಕೇರಿ : ಭಾರತೀಯ ವಾಯುಪಡೆಯು ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್ಗಳಿಗಾಗಿ ಅಗ್ನಿಪಥ್ ಯೋಜನೆಯಡಿ ವಾಯುಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆಸಲ್ಲಿಸಲು ಹಾಗೂ ಜನವರಿ 2023 ರಲ್ಲಿ ನಡೆಯುವ ಆನ್ಲೈನ್ ಆಯ್ಕೆ ಪರೀಕ್ಷೆಗೆ ಪಿಯುಸಿ(ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ) ಕನಿಷ್ಠ ಶೇ.50, ಮತ್ತು ಇಂಗ್ಲೀಷ್ನಲ್ಲಿ ಶೇ.50 ಅಂಕಗಳೊಂದಿಗೆ, ಉತ್ತೀರ್ಣರಾದ ಅವಿವಾಹಿತ ಯುವಕ, ಯುವತಿಯರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು 2002 ರ ಜೂನ್, 27 ರಿಂದ 2005ರ ಡಿಸೆಂಬರ್, 27 ರ ನಡುವೆ (ಎರಡು ದಿನಾಂಕಗಳನ್ನು ಒಳಗೊಂಡಂತೆ) ಜನಿಸಿದವರಾಗಿರಬೇಕು. ಆನ್ಲೈನ್ ಅರ್ಜಿ ನೋಂದಣಿಗೆ https://agnipathvayu.cdac.in ವೆಬ್ಸೈಟ್ಗೆ ಭೇಟಿ ನೀಡುವುದು, ಆನ್ಲೈನ್ ಅರ್ಜಿ ನೋಂದಣಿಗೆ ನವೆಂಬರ್, 23 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ https://careerindianairforce.cdac.in ನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಅಥವಾ ದೂ.ಸಂ.08272-225851 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.
BIGG NEWS: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ : ತೀರ್ಥಹಳ್ಳಿ ಐದು ಮನೆಗಳ ಮೇಲೆ ಪೊಲೀಸರ ದಾಳಿ, ಮುಂದುವರೆದ ಶೋಧ ಕಾರ್ಯ