ಕೊಪ್ಪಳ : ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಹೊಸದಾಗಿ ತಾಂತ್ರಿಕ ಸಹಾಯಕರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ನೆರವು ನೀಡಲು ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಹೊರ ಗುತ್ತಿಗೆ ಅಧಾರದಲ್ಲಿ ಮಾನವ ಸಂಪನ್ಮೂಲ ಸಂಸ್ಥೆಗಳ ಮೂಲಕ ಸೇವೆಯನ್ನು ಪಡೆಯಲು ತಾಂತ್ರಿಕ ಸಹಾಯಕರು ಹುದ್ದೆಗಳಾದ ಕೃಷಿ-05 ಅರಣ್ಯ 07 ಮತ್ತು ರೇಷ್ಮೆ 01 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಎನ್ಐಸಿ ಜಿಲ್ಲಾ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು 2023ರ ಜನವರಿ 09 ಕೊನೆಯ ದಿನವಾಗಿದ್ದು, ಹುದ್ದೆಗಳ ವಿವರ ವಿದ್ಯಾರ್ಹತ ಹಾಗೂ ಅನುಭವ, ವಯೋಮಿತಿ, ಮಾಸಿಕ ಸಂಭಾವನ, ಹೆಚ್ಚಿನ ವಿವರಗಳಿಗಾಗಿ ಎನ್ಐಸಿ ಜಿಲ್ಲಾ ವೆಬ್ಸೈಟ್ www.koppal.nic.in ನ್ನು ಅಥವಾ ಜಿ.ಪಂ. ಕಾರ್ಯಾಲಯಕ್ಕೆ ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಜನವರಿ 12 ರಂದು ಜಿಲ್ಲಾ ಪಂಚಾಯತಿ ಹಾಜರಾಗಬೇಕು. ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಣೆ ಮಾಡಲಾಗುವುದು. ಈ ತಾತ್ಕಾಲಿಕ ಮೆರಿಟ್ ಪಟ್ಟಿಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆ ಸಲ್ಲಿಸುವ ಜ.18 ರಿಂದ ಜ. 24 ರವರೆಗೆ (ತದನಂತರದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ) ಅವಕಾಶವಿದ್ದು, ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಜನವರಿ 30 ರಂದು ಪ್ರಕಟಣೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIGG NEWS : `ನನ್ನ ಸ್ಮಾರಕ ಮಾಡಬೇಡಿ’ : 2014 ರಲ್ಲೇ ವಿಲ್ ಬರೆದಿದ್ದ ಸಿದ್ದೇಶ್ವರ ಶ್ರೀಗಳು