ಬೀದರ್: ನಗರದ ನೆಹರೂ ಕ್ರೀಢಾಂಗಣದಲ್ಲಿ ಇಂದು ಅಗ್ನಿಪತ್ ನೇಮಕಾತಿಗಾಗಿ Rally ನಡೆಯಲಿದೆ. ಅಗ್ನಿಪಥ್ ನೇಮಕಾತಿಗಾಗಿ ( Appointment of Agneepath ) ನಡೆಯುವಂತ ಸೇನಾ Rallyಯಲ್ಲಿ 70 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 5ರ ಇಂದಿನಿಂದ 22ರವರೆಗೆ ಬೀದರ್ ನ ಜಿಲ್ಲಾ ನೆಹರು ಕ್ರೀಢಾಂಗಣದಲ್ಲಿ ಅಗ್ನಿಪಥ್ ಸೇನಾ ನೇಮಕಾತಿಗಾಗಿ Rallyಯನ್ನು ಆಯೋಜಿಸಲಿದೆ. ಈಗಾಗಲೇ ಇದಕ್ಕಾಗಿ ಎಲ್ಲಾ ತಯಾರಿಯನ್ನು ಮುಕ್ತಾಯಗೊಳಿಸಲಾಗಿತ್ತು, ಇಂದು 70,357 ಅಭ್ಯರ್ಥಿಗಳು ಬೀದರ್, ಕಲಬುರ್ಗಿ, ರಾಯಚೂರು, ಬೆಳಗಾವಿ ಮತ್ತು ಯಾದಗಿರಿ ಜಿಲ್ಲೆಯಿಂದ ಆಗಮಿಸಲಿದ್ದಾರೆ ಎನ್ನಲಾಗಿದೆ.
BIGG NEWS : ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಕ್ರಮ : ಇಂದಿನಿಂದ 1-15 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲೇ ಲಸಿಕೆ
ಅಂದಹಾಗೇ ನೆಹರು ಜಿಲ್ಲಾ ಕ್ರೀಢಾಂಗಣದಲ್ಲಿ ನೆಡೆಯಲಿರುವಂತ ಅಗ್ನಿಪಥ್ ಸೇನಾ ನೇಮಕಾತಿ Rallyಯಲ್ಲಿ ಭಾಗವಹಿಸುವಂತ ಅಭ್ಯರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಸೌಕಲ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಇಂದು ಬೆಳಿಗ್ಗೆ 4 ಗಂಟೆಯಿಂದಲೇ ಅಭ್ಯರ್ಥಿಗಳು ಆಗಮಿಸಿದ್ದು, ಹೀಗಾಗಿ ಅಭ್ಯರ್ಥಿಗಳ ದೈಹಿಕ ಪರೀಕ್ಷೆ, ಮೆಡಿಕಲ್ ಟೆಸ್ಟ್ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ.