ಹಾವೇರಿ : ಬೆಂಗಳೂರು ಸ್ಟಾಫ್ ಸೆಲೆಕ್ಷನ್ ಕಮಿಷನ್(ಕೆಕೆಆರ್) ವತಿಯಿಂದ 1411 ಕಾನ್ಸ್ಟೇಬಲ್ (ಡ್ರೈವರ್) ಹುದ್ದೆಗಳಿಗೆ ಪುರುಷರಿಂದ ಹಾಗೂ 857 ಹೆಡ್ ಕಾನ್ಸ್ಟೇಬಲ್ (ಎಡಬ್ಲ್ಯೂಒ) ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾನ್ಸ್ಟೇಬಲ್(ಡ್ರೈವರ್) ಹುದ್ದೆಗೆ ಅಭ್ಯರ್ಥಿಗಳು 10+2 ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ 21 ರಿಂದ30 ವರ್ಷದೊಳಗಿರಬೇಕು ಹಾಗೂ ಇತರೆ ವರ್ಗದವರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ. ಹೆಡ್ ಕಾನ್ಸ್ಟೇಬಲ್ (ಎಡಬ್ಲ್ಯೂಒ) ಹುದ್ದೆಗೆ ಅಭ್ಯರ್ಥಿಗಳು 10+2 ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ 18 ರಿಂದ27 ವರ್ಷದೊಳಗಿರಬೇಕು ಹಾಗೂ ಇತರೆ ವರ್ಗದವರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ.
BIGG NEWS : ಅಜಾದಿ ಕಾ ಅಮೃತ ಮಹೋತ್ಸವ : ರಾಜ್ಯದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜನೆ
ಅರ್ಹ ಅಭ್ಯರ್ಥಿಗಳು ದಿನಾಂಕ 29-07-2022 ರೊಳಗಾಗಿ ವೆಬ್ಸೈಟ್ https://ssc.nic.inನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.080-25502520,ಮೊ.9483862020, ದೂ.08375-249291 ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.