ಬಳ್ಳಾರಿ : ಜಿಲ್ಲಾ ಉದ್ಯೊಗ ವಿನಿಮಯ ಕಚೇರಿ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಯುಕ್ತಾಶ್ರದಲ್ಲಿ ಕುಮಾರಸ್ವಾಮಿ ದೇವಸ್ಥಾನದ ಹತ್ತಿರದ ಸಂಜಯ್ ಗಾಂಧಿ ನಗರದ ಸಂಜಯ್ ಗಾಂಧಿ ಪಾಲಿಟೆಕ್ನಿಕ್ನಲ್ಲಿ ಸೆ.27ರಂದು ಬೆಳಗ್ಗೆ 10ಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
BREAKING NEWS: ಇಂದಿನಿಂದ B.L ಸಂತೋಷ ರಾಜ್ಯ ಪ್ರವಾಸ; ಕುತೂಹಲ ಮೂಡಿಸಲಿರುವ ಸಿಎಂ ಬೊಮ್ಮಾಯಿ ಭೇಟಿ
ಈ ಉದ್ಯೋಗ ಮೇಳದಲ್ಲಿ 25ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಆಯ್ಕೆ ಮಾಡಿಕೊಳ್ಳುವರು.
ವಿದ್ಯಾರ್ಹತೆ: ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಡಿ.ಇಡಿ, ಬಿ.ಇಡಿ ಮತ್ತು ನರ್ಸಿಂಗ್ ಹಾಗೂ ಇತ್ಯಾದಿ.
ಈ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಮೂಲ ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವವಿವರ (RESUME) ಹಾಗೂ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅಥವಾ ಮೊ.7892971984, 9148793888, 8904213400, 9480812138, 8073365184, 9019692898 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
BREAKING NEWS: ಇಂದಿನಿಂದ B.L ಸಂತೋಷ ರಾಜ್ಯ ಪ್ರವಾಸ; ಕುತೂಹಲ ಮೂಡಿಸಲಿರುವ ಸಿಎಂ ಬೊಮ್ಮಾಯಿ ಭೇಟಿ