ನವದೆಹಲಿ : ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 2023-24ರ ಹಣಕಾಸು ವರ್ಷದಲ್ಲಿ 710 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಇನ್ಸ್ಟಿಟ್ಯೂಟ್ನಿಂದ ಬ್ಯಾಚುಲರ್ ಡಿಗ್ರಿ, ಪಿಜಿ ಅಥವಾ ತತ್ಸಮಾನ ಪದವಿಯನ್ನ ಹೊಂದಿರಬೇಕು. ನವೆಂಬರ್ 1, 2022 ಕ್ಕೆ ಅನ್ವಯವಾಗುವಂತೆ ಅರ್ಜಿದಾರರ ವಯಸ್ಸು 20 ರಿಂದ 30 ವರ್ಷಗಳ ನಡುವೆ ಇರಬೇಕು. ಇದರರ್ಥ ನವೆಂಬರ್ 2, 1992 ಮತ್ತು ನವೆಂಬರ್ 1, 2002ರ ನಡುವೆ ಜನಿಸಿದವರು ಅರ್ಹರು. ಇನ್ನು ಕಾಯ್ದಿರಿಸಿದ ವರ್ಗಗಳಿಗೆ ವಯಸ್ಸಿನ ಮಿತಿ ಇರುತ್ತದೆ.
BREAKING NEWS : ದೊಡ್ಡಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು
ಆಸಕ್ತ ಅಭ್ಯರ್ಥಿಗಳು ನವೆಂಬರ್ 21, 2022 ರಂದು ಅಥವಾ ಅದಕ್ಕೂ ಮೊದಲು ಆನ್ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 850 ರೂ ಮತ್ತು ಎಸ್ಸಿ / ಎಸ್ಟಿ / ಪಿಡಬ್ಲ್ಯೂಬಿಡಿ / ಇಡಬ್ಲ್ಯೂಎಸ್ / ಮಹಿಳಾ ಅಭ್ಯರ್ಥಿಗಳು 175 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಂತಿಮ ಆಯ್ಕೆಯು ಲಿಖಿತ ಪರೀಕ್ಷೆ (ಪೂರ್ವಭಾವಿ, ಮುಖ್ಯ) ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ.
BIGG NEWS : ಕಾಶಿಯಾತ್ರೆಗೆ ಹೋಗುವವರಿಗೆ 5,000 ರೂ.ಸಹಾಯಧನ : ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಖಾಲಿ ಹುದ್ದೆಗಳ ವಿವರ.!
- ಐಟಿ ಆಫೀಸರ್ (ಸ್ಕೇಲ್-1) ಹುದ್ದೆಗಳು: 44
- ಕೃಷಿ ಕ್ಷೇತ್ರಾಧಿಕಾರಿ (ಸ್ಕೇಲ್-1) ಹುದ್ದೆಗಳು: 516
- ರಾಜಭಾಷಾ ಅಧಿಕಾರಿ (ಸ್ಕೇಲ್-1) ಹುದ್ದೆಗಳು: 25
- ಕಾನೂನು ಅಧಿಕಾರಿ (ಸ್ಕೇಲ್-1) ಹುದ್ದೆಗಳು: 10
- ಮಾನವ ಸಂಪನ್ಮೂಲ / ಪರ್ಸನಲ್ ಆಫೀಸರ್ (ಸ್ಕೇಲ್-1) ಹುದ್ದೆಗಳು: 15
- ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1) ಹುದ್ದೆಗಳು: 100
ಲಿಖಿತ ಪರೀಕ್ಷಾ ವಿಧಾನ.!
ಪ್ರಾಥಮಿಕ ಲಿಖಿತ ಪರೀಕ್ಷೆಯನ್ನ 2 ಗಂಟೆಗಳಲ್ಲಿ ಒಟ್ಟು 150 ಪ್ರಶ್ನೆಗಳಿಗೆ ಆನ್ಲೈನ್ ಮೋಡ್ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯು ಇಂಗ್ಲಿಷ್ ಭಾಷೆಯಲ್ಲಿ 50 ಪ್ರಶ್ನೆಗಳಿಗೆ 25 ಅಂಕಗಳು, ರೀಸನಿಂಗ್ನಲ್ಲಿ 50 ಪ್ರಶ್ನೆಗಳಿಗೆ 50 ಅಂಕಗಳು ಮತ್ತು ಸಾಮಾನ್ಯ ಅರಿವಿನ 50 ಪ್ರಶ್ನೆಗಳಿಗೆ 50 ಅಂಕಗಳು. ಮುಖ್ಯ ಪರೀಕ್ಷೆಯನ್ನ 60 ಪ್ರಶ್ನೆಗಳಲ್ಲಿ 60 ಅಂಕಗಳಿಗೆ 45 ನಿಮಿಷಗಳಲ್ಲಿ ನಡೆಸಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಶಾರ್ಟ್ಲಿಸ್ಟ್ ಆದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಅದರ ನಂತರ, ಅದರಲ್ಲಿ ಪ್ರತಿಭೆತೋರಿಸಿದವರನ್ನು ಉದ್ಯೋಗಗಳಿಗೆ ಆಯ್ಕೆ ಮಾಡಲಾಗುತ್ತದೆ.