ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ಭರ್ಜರಿ ಸಿಹಿಸುದ್ದಿ ನೀಡಿದ್ದು, 2023-24 ನೇ ಸಾಲಿನ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಪ್ರೊಬೆಷನರಿ ಆಫೀಸರ್ ಮ್ಯಾನೇಜ್ ಮೆಂಟ್ ಟ್ರೇನಿ ಸೇರಿ 6,342 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
BIGG NEWS : ‘KPSCಯ ವಿವಿಧ ಹುದ್ದೆ’ಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ
6,342 ಬ್ಯಾಂಕ್ ಆಫೀಸರ್ ಹುದ್ದೆಗ ಭರ್ತಿಗೆ ಐಬಿಪಿಎಸ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 2 ರಿಂದ ಅವಕಾಶ ನೀಡಲಾಗಿದೆ. ಕೆನರಾ ಬ್ಯಾಂಕ್ 2,500 ಹುದ್ದೆಗಳಿಗೆ ಯುಕೋಬ್ಯಾಂಕ್ 2,094 ಆಫೀಸರ್ ಗಳನ್ನು ಐಬಿಪಿಎಸ್ ಮೂಲಕ ನೇಮಕ ಮಾಡಿಕೊಳ್ಳಲಿದೆ. ಆಗಸ್ಟ್ 22 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.
ಅಧಿಕೃತ ವೆಬ್ ಸೈಟ್ www.ibps.in.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ನೇಮಕ ಸಂಬಂಧ ಬರುವ ಅಕ್ಟೋಬರ್ ನಲ್ಲಿ ಪೂರ್ವ ಭಾವಿ ಹಾಗೂ ಮುಖ್ಯ ಪರೀಕ್ಷೆ ನವೆಂಬರ್ ನಲ್ಲಿ ನಡೆಸಲಾಗುವುದು ಎಂದು ಐಬಿಪಿಎಸ್ ತಿಳಿಸಿದೆ.