ಬಳ್ಳಾರಿ : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಸಮುದಾಯ ಆರೋಗ್ಯ ಅಧಿಕಾರಿಗಳ (ಸಿ.ಹೆಚ್.ಓ) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದ್ದಾರೆ.
HEALTH TIPS: ಬೆಳ್ಳುಳ್ಳಿಯ ನಾಲ್ಕು ವಿಧಗಳಲ್ಲಿ ಅಡುಗೆಗೆ ಯಾವುದು ಉತ್ತಮ ? ಇಲ್ಲಿದೆ ಅಗತ್ಯ ಮಾಹಿತಿ | Garlic
ಬಿ.ಎಸ್ಸಿ ಮತ್ತು ಪೋಸ್ಟ್ ಬಿ.ಎಸ್ಸಿ ವಿದ್ಯಾರ್ಹತೆ ಹೊಂದಿರುವ ಇಚ್ಚೆಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮಾಸಿಕ ಸಂಭಾವನೆ: ರೂ. 24,200/- ಹೆಚ್ಚಿನ ಆದ್ಯತೆವುಳ್ಳ ಜಿಲ್ಲೆಗಳು ಹಾಗೂ ರೂ.22ಸಾವಿರ ಆದ್ಯತೆ ಹೊರತುಪಡಿಸಿದ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ಬಯಸುವವರಿಗೆ ನೀಡಲಾಗುವುದು. ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ರೂ.8ಸಾವಿರವರೆಗೆ ನೀಡಲಾಗುವುದು.
ವಯೋಮಿತಿ: ಸಾಮಾನ್ಯ ಅಭ್ಯರ್ಥಿ 35 ವರ್ಷ, ಎಸ್.ಸಿ ಮತ್ತು ಎಸ್.ಟಿ ಪ್ರ.ವರ್ಗ 1 ಹಾಗೂ ಮಾಜಿ ಸೈನಿಕ 40 ವರ್ಷ, 2ಎ,2ಬಿ,3ಎ,3ಬಿ ಹಾಗೂ ಇತರೆ ಹಿಂದುಳಿದ ವರ್ಗ (ರಾಜ್ಯ) 38ವರ್ಷ ತುಂಬಿರಬೇಕು.
ಸೂಚನೆ:6ನೇ ನೇಮಕಾತಿ ಪ್ರಕಟಣೆಯಾದ್ದರಿಂದ ಕಲ್ಯಾಣ ಕರ್ನಾಟಕ (ಊಏ) ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ರೋಸ್ಡರ್ ನಿಯಮಾನುಸಾರ ಇತರೆ (ಓoಟಿ ಊಏ) ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟು ಹುದ್ದೆಗಳು: 15 ಹುದ್ದೆಗಳು (371 (ಜೆ) ಅನ್ವಯ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತವೆ.
ಅರ್ಜಿಯನ್ನು ಕೇವಲ ಆನ್ಲೈನ್ ಮುಖಾಂತರ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಲ್ಲಿಸಬೇಕು ಹಾಗೂ ಪರೀಕ್ಷೆಯನ್ನು ಆನ್ಲೈನ್ ಮುಖಾಂತರ ನಡೆಸಲಾಗುವುದು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 08 ಆಗಿರುತ್ತದೆ. ಆನ್ ಲೈನ್ ಪರೀಕ್ಷೆ ದಿನಾಂಕ ನ.19 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿhttp://karunadu.karnataka.gov.in/hfw ಹಾಗೂ ದೂ.08392-274033 ಗೆ ಸಂಪರ್ಕಿಸಬಹುದಾಗಿದೆ.
BREAKING NEWS: ಓಲಾ ,ಉಬರ್ ಜೊತೆಗಿನ ಸಭೆ ಅಂತ್ಯ; 2 ಕಿ.ಮೀ.ಗೆ ಆಟೋ ದರ 100 ರೂ. ನಿಗದಿ ಪಡಿಸಲು ಮನವಿ