ಬಳ್ಳಾರಿ : ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಖಾಲಿಯಿರುವ ಗ್ರಾಮ ಪಂಚಾಯಿತಿವಾರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಗೋವಿಂದಪ್ಪ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿವಾರು ಸಂಡೂರು ತಾಲ್ಲೂಕಿನಲ್ಲಿ 07, ಬಳ್ಳಾರಿ ತಾಲ್ಲೂಕಿನಲ್ಲಿ 02, ಸಿರುಗುಪ್ಪ ತಾಲ್ಲೂಕಿನಲ್ಲಿ 01 ಒಟ್ಟು 10 ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ(ಗಿಖW) ಹುದ್ದೆಗಳು ಖಾಲಿಯಿದ್ದು, ಆಯಾ ತಾಲ್ಲೂಕಿನ ಸದ್ರಿ ಹುದ್ದೆಗಳನ್ನು ತಾಲ್ಲೂಕು ಪಂಚಾಯತಿಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಇವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮುಖಾಂತರ ನೇಮಕಗೊಳಿಸಬೇಕಾಗಿರುತ್ತದೆ.
ಬಳ್ಳಾರಿ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 03 ನಗರ ಪುನರ್ವಸತಿ ಕಾರ್ಯಕರ್ತರ (UಖW) ಹುದ್ದೆಗಳು ಖಾಲಿಯಿದ್ದು, ಮಹಾ ನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮುಖಾಂತರ ನಿಯಮಾನುಸಾರ ನೇಮಕಗೊಳಿಸಬೇಕಾಗಿರುತ್ತದೆ.
ಸದರಿ ಹುದ್ದೆಗಳು ಗೌರವ ಧನ ಆಧಾರಿತ ತಾತ್ಕಾಲಿಕ ಹುದ್ದೆಗಳಾಗಿರುತ್ತವೆ. ಹುದ್ದೆಗಳಿಗೆ ಮಾಸಿಕ ಗೌರವಧನ ರೂ.9ಸಾವಿರ ಇರುತ್ತದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ವಿಕಲಚೇತನರು (ಕರ್ತವ್ಯ ನಿರ್ವಹಿಸಲು ಸಮರ್ಥರಿರುವವರು) ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 26 ಆಗಿರುತ್ತದೆ.
BIGG NEWS: ಗುಜರಾತ್ನಲ್ಲಿ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸಿದೆ : ಮಾಜಿ ಸಿಎಂ ಸದಾನಂದ ಗೌಡ ಪ್ರತಿಕ್ರಿಯೆ
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಎಂಆರ್ಡಬ್ಲ್ಯೂ ರಾಣಿ ಅವರ ಮೊ.8880875620, ಸಂಡೂರು ಎಂಆರ್ಡಬ್ಲ್ಯೂ ಕರಿಬಸಜ್ಜ ಅವರ ಮೊ.9632052270, ಸಿರುಗುಪ್ಪ ಎಂಆರ್ಡಬ್ಲ್ಯೂ ಸಾಬೇಶ ಅವರ ಮೊ.9743509698 ಹಾಗೂ ಜಿಲ್ಲಾ ಸಂಯೋಜಕ ಟೇಕ್ ರಾಜ್ ಅವರ ಮೊ.9481320119 ಅಥವಾ ಕಚೇರಿ ದೂ.08392267886ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.