ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ (Karnataka State Police) ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
BIGG NEWS : ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಡಿ.ಕೆ. ಶಿವಕುಮಾರ್ ಭಯ ಕಾಡಲಿದೆ : ಸಚಿವ ಶ್ರೀರಾಮುಲು
ಒಟ್ಟು 1591 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, . ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 21 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಲ್ಲಿ 454 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿರಿಸಲಾಗಿದ್ದು, 1137 ಹುದ್ದೆಗಳು ಸಾಮಾನ್ಯ ಹುದ್ದೆಗಳಾಗಿವೆ. ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷಗಳು ಮೀರಿರಬಾರದು. ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅ.20 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು. ಅರ್ಜಿ ಸಲ್ಲಿಸಲು 21 ನವೆಂಬರ್ ಕೊನೆಯ ದಿನಾಂಕವಾಗಿದೆ.
BIGG NEWS : ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಣಿ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ
ವಯೋಮಿತಿ ಸಡಿಲಿಕೆ:
ಪ.ಜಾ, ಪ.ಪಂ ಮತ್ತು ಒಬಿಸಿ ಅಭ್ಯರ್ಥಿಗಳು: 2 ವರ್ಷಗಳು
ಬುಡಕಟ್ಟು ಜನಾಂಗದಲ್ಲಿ ವಾಸಿಸುತ್ತಿದ್ದಾರೆ: 05 ವರ್ಷಗಳು
ಅರ್ಜಿ ಶುಲ್ಕ:
ಪ.ಜಾ .ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳು: 200 ರೂ.
ಸಾಮಾನ್ಯ, ಪ್ರವರ್ಗ -2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 400 ರೂ.
ಹೆಚ್ಚಿನ ಮಾಹಿತಿಗಾಗಿ ksp.karnataka.gov.in ಭೇಟಿ ನೀಡಬಹುದಾಗಿದೆ. ಅಧಿಕೃತ ಅಧಿಸೂಚನೆಗಾಗಿ https://drive.google.com/file/d/1QbQdW0oLLfW3J-DrRbMC8FmsyNq7us19/view ಹಾಗೂ https://drive.google.com/file/d/1RRScQzmDYNq-3iS2DN47zHyWUoXGEgXT/view ವೀಕ್ಷಿಸಬಹುದಾಗಿದೆ.