ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ( Department of Health and Family Welfare ) ಖಾಲಿ ಇರುವಂತ ವಿವಿಧ 320 ಹುದ್ದೆಗಳ ಭರ್ತಿಗೆ ಆನ್ ಲೈನ್ ( Online ) ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಇಲಾಖೆಯ ಕಲ್ಯಾಣ-ಕರ್ನಾಟಕ ಜಿಲ್ಲೆಗಳಾದ ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ ಅರೆ-ವೈದ್ಯಕೀಯ ಹಾಗೂ ಬ್ಯಾಕ್ ಲಾಗ್ ಹುದ್ದೆಗಳ ( Backlog Recruitment ) ಭರ್ಜಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದೆ.
ಹುದ್ದೆಗಳ ವಿವರ
- ಸೈಕಾಲಜಿಸ್ಟ್ -03
- ಸೈಕ್ಯಾಟ್ರಿಸ್ಟ್ ಸೋಷಿಯಲ್ ವರ್ಕರ್ – 01
- ಮೈಕ್ರೋಬಯೋಲಜಿಸ್ಟ್ -06
- ಅಸಿಸ್ಟೆಂಟ್ ಎಕೋಲಜಿಸ್ಟ್ -01
- ಫಿಸಿಯೋಥೆರಪಿಸ್ಟ್ – 05
- ಡೆಂಟಲ್ ಮೆಕ್ಯಾನಿಕ್ -03
- ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ – 54
- ಅಪ್ತಲ್ಮಿಕ್ ಆಫೀಸರ್ – 15
- ಫಾರ್ಮಸಿಸ್ಟ್ – 98
- ಇಸಿಡಿ ಟೆಕ್ನೀಷಿಯನ್ – 05
- ಡಯಾಲಿಸಿಸ್ ಟೆಕ್ನೀಷಿಯನ್ -02
- ಜೂನಿಯರ್ ಹೆಲ್ತ್ ಅಸಿಸ್ಟೆನ್ಸ್ – 126
- ಎಲೆಕ್ಟ್ರೀಷಿಯನ್ -01
ವೇತನ ಶ್ರೇಣಿ
- ಸೈಕಾಲಜಿಸ್ಟ್ – ರೂ.43,100 ರಿಂದ 83,900
- ಸೈಕ್ಯಾಟ್ರಿಸ್ಟ್ ಸೋಷಿಯಲ್ ವರ್ಕರ್ – ರೂ.43,100 ರಿಂದ 83,900
- ಮೈಕ್ರೋಬಯೋಲಜಿಸ್ಟ್ –ರೂ.43,100 ರಿಂದ 83,900
- ಅಸಿಸ್ಟೆಂಟ್ ಎಕೋಲಜಿಸ್ಟ್ – ರೂ.40,900 ರಿಂದ 78,200
- ಫಿಸಿಯೋಥೆರಪಿಸ್ಟ್ – ರೂ.30,350 ರಿಂದ 58,250
- ಡೆಂಟಲ್ ಮೆಕ್ಯಾನಿಕ್ – ರೂ.30,350 ರಿಂದ ರೂ.58,250
- ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ – ರೂ.27,650 ರಿಂದ 56,650
- ಅಪ್ತಲ್ಮಿಕ್ ಆಫೀಸರ್ –ರೂ.27,650 ರಿಂದ 52,650
- ಫಾರ್ಮಸಿಸ್ಟ್ – ರೂ.27,650, 52,650
- ಇಸಿಡಿ ಟೆಕ್ನೀಷಿಯನ್ – 27,650 ರಿಂದ 52,650
- ಡಯಾಲಿಸಿಸ್ ಟೆಕ್ನೀಷಿಯನ್ – ರೂ.27,650 ರಿಂದ 52,650
- ಜೂನಿಯರ್ ಹೆಲ್ತ್ ಅಸಿಸ್ಟೆನ್ಸ್ – ರೂ.23,500 ರಿಂದ ರೂ.47,650
- ಎಲೆಕ್ಟ್ರೀಷಿಯನ್ – ರೂ.23,500 ರಿಂದ 47,650
ಪ್ರಮುಖ ದಿನಾಂಕಗಳು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 29-08-2022ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 28-09-2022 ಆಗಿದೆ. ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 29-09-2022 ಆಗಿದೆ.
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.700, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.400, ಮಾಜಿ ಸೈನಿಕರಿಗೆ ರೂ.200, ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ವಿಕಲಚೇತನರಿಗೆ ರೂ.100.
ವಯೋಮಿತಿ
ಸಾಮಾನ್ಯ ವರ್ಗದವರಿಗೆ 35 ವರ್ಷ, 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷಗಳು. ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು.
ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು http://karunadu.karnataka.gov.in/hfw/pages/hfws_sections_drc.aspx ಜಾಲತಾಣಕ್ಕೆ ಭೇಟಿ ನೀಡಿ, ಭರ್ಜಿ ಮಾಡಿ ಸಲ್ಲಿಸಬಹುದಾಗಿದೆ. ಅಲ್ಲದೇ ಇದೇ ಜಾಲತಾಣದಲ್ಲಿ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕೂಡ ಪಡೆಯಬಹುದಾಗಿದೆ.