ಬೆಳಗಾವಿ : ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಸಾರಿಗೆ ಇಲಾಖೆಯಲ್ಲಿ ಶೀಘ್ರದಲ್ಲಿ 9000 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.ಅಲ್ಲದೆ ಶೀಘ್ರದಲ್ಲೇ ನಾಲ್ಕು ನಿಗಮಗಳಿಗೆ 5800 ಹೊಸ ಬಸ್ ಖರೀದಿ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಬೆಳಗಾವಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಸ್‌ಗಳ ಸಂಖ್ಯೆ ಕಡಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಒಂದೇ ಒಂದು ಬಸ್ ಖರೀದಿಸಿಲ್ಲ. ಇದರಿಂದಾಗಿ ಬಸ್‌ಗಳ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣ. ಬಸ್‌ಗಳ ಸಂಖ್ಯೆ ಹೆಚ್ಚಾಗಬೇಕಿದೆ. ಆದ್ದರಿಂದ ಒಟ್ಟು 5800 ಬಸ್‌ಗಳನ್ನು ಖರೀದಿ ಮಾಡಲು ಯೋಜನೆ ರೂಪಿಸಿದ್ದೇವೆ. ಮಾರ್ಚ್ ಅಥವಾ ಏಪ್ರಿಲ್ ಒಳಗೆ 5000 ಬಸ್‌ಗಳು ಬರುತ್ತವೆ ಎಂದು ಮಾಹಿತಿ ನೀಡಿದರು.
`ಬಗರ್ ಹುಕುಂ ಸಾಗುವಳಿ’ದಾರರಿಗೆ ಭರ್ಜರಿ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಅನರ್ಹಗೊಂಡ ಅರ್ಜಿ’ ಪುನರ್ ಪರಿಶೀಲನೆ
ನಾನು ಇಲ್ಲದೇ ಇರುವಾಗ ಬಸ್ ಅವಶ್ಯಕತೆ ಇದ್ದಿದ್ದಕ್ಕೆ ಹಳೇ ಬಸ್ ತಗೊಂಡಿದ್ದಾರೆ. ಇನ್ನೂ ಎಲೆಕ್ಟ್ರಿಕ್ ಬಸ್‌ಗಳ ಟೆಂಡರ್ ಕರೆದಿದ್ದೇವೆ. ಜಿಸಿಸಿ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ ಓಡಲಿವೆ. ಬಸ್ ಹಾಗೂ ಚಾಲಕರು ಟೆಂಡರ್ ಪಡೆದುಕೊಂಡವರ ಕಡೆಯವರೇ ಇರುತ್ತಾರೆ. ಆದರೆ, ನಿರ್ವಾಹಕರು ಮಾತ್ರ ನಮ್ಮವರು ಇರುತ್ತಾರೆ. ಪ್ರತಿ ಕಿಮೀಗೆ ಇಷ್ಟು ಅಂತ ಹಣ ನಿಗದಿ ಮಾಡಿ ಎಲೆಕ್ಟ್ರಿಕ್ ಬಸ್ ಪ್ರಾರಂಭ ಆಗುತ್ತವೆ ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಚಾಲಕರು ಹಾಗೂ ನಿರ್ವಾಹಕರು ನಿವೃತ್ತಿ ಹೊಂದಿದ್ದಾರೆ ಹೀಗೆ ನೆಲೆಯಲ್ಲಿ ಸಂಸ್ಥೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತೇವೆ. ಆದ್ದರಿಂದ ಸರ್ಕಾರ 9000 ಹುದ್ದೆಗಳ ನೇಮಕಕ್ಕೆ ಅನುಮತಿ ನೀಡಿದೆ ಆದ್ದರಿಂದ ಶೀಘ್ರದಲ್ಲಿ ನಿಮಗಾಗಿ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದರು.
‘ಉದ್ಯೋಗಾಕಾಂಕ್ಷಿ’ಗಳಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ‘1000 ಗ್ರಾಮ ಲೆಕ್ಕಿಗ ನೇಮಕಾತಿ ಅಧಿಸೂಚನೆ