ಮಡಿಕೇರಿ : ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆಯ 9 ಅಂಗನವಾಡಿ ಕಾರ್ಯಕರ್ತೆ ಹಾಗೂ 25 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Big news: ಸೆಪ್ಟೆಂಬರ್ 2ಕ್ಕೆ ಪ್ರಧಾನಿ ʻನರೇಂದ್ರ ಮೋದಿʼ ಮಂಗಳೂರಿಗೆ ಭೇಟಿ | PM Modi to visit Mangaluru
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ಬೀರುಗ 1, ಹೊಸನಲ್ಲಿಕೋಟೆ, ಪೊದಕೇರಿ ಮಿನಿ, ಸಿಂಕೋನ ಮಿನಿ, ಕೂಟಿಯಾಲ, ಕಾಟಿಗುಂಡಿ ಪೈಸಾರಿ , ಹೊಲಮಾಳ, ಕನ್ನಡಮಠ, ಹಳ್ಳಿಗಟ್ಟು ಮಿನಿ
ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ಕುಂದ, ಕಾಟಿಗುಂಡಿ ಪೈಸಾರಿ, ಬಿ.ಶೆಟ್ಟಿಗೇರಿ, ದೇವನೂರು 2, ತೆರಾಲು 2, ಗದ್ದೆಮನೆ, ಹೊಸನಲ್ಲಿಕೋಟೆ, ಆಂಗೋಡು, ಬೇಗೂರು 2, ಹೈಸೋಡ್ಲೂರು, ಪೊನ್ನಪೇಟೆ 3, ಬೀರುಗ 1, ಕುಂದೂರು, ದುಬಾರೆ ಕಲ್ಲುಕೋರೆ, ಕ್ರಿಶ್ಚಿಯನ್ ಕಾಲೋನಿ, ರುದ್ರಗುಪ್ಪೆ, ಪುಲಿಯೇರಿ, ಅಂಬುಕೋಟೆ, ಬೆಸಗೂರು 2, ಕಲ್ತೋಡು, ನಾಂಗಾಲ, ಬೈರಂಬಾಡ, ಬಾಡಗಬಾಣಂಗಾಲ,ಕಣ್ಣಂಗಾಲ, ಅಯ್ಯಪ್ಪಬೆಟ್ಟ,
BIGG NEWS : `ಮರಳು ನೀತಿಗೆ ತಿದ್ದುಪಡಿ’ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 15 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು. 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್ಸೈಟ್ www.anganwadirecruit.kar.nic.in ನಲ್ಲಿ ಅರ್ಜಿ ಭರ್ತಿ ಮಾಡಬಹುದಾಗಿದೆ. ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಇತರೆ ಯಾವುದೇ ರೂಪದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗೆ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ-08274-201878 ದೂರವಾಣಿ ಸಂಖ್ಯೆಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.