ಬಳ್ಳಾರಿ : ಭಾರತೀಯ ವಾಯುಪಡೆಯಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಅವಿವಾಹಿತ ಪುರುಷ ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿಎಸ್ ಹಟ್ಟಪ್ಪ ಅವರು ತಿಳಿಸಿದ್ದಾರೆ.
ಅರ್ಹತೆ: ದ್ವಿತೀಯ ಪಿ.ಯು.ಸಿಯಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು 27 ಜೂನ್ 2002ರಿಂದ 27 ಡಿಸೆಂಬರ್ 2005ರ ನಡುವೆ ಜನಿಸಿರಬೇಕು. ಆನ್ಲೈನ್ನಲ್ಲಿ ನೊಂದಣಿಗೆ ನವೆಂಬರ್ 23 ಕೊನೆಯ ದಿನವಾಗಿರುತ್ತದೆ. ಆನ್ಲೈನ್ ನೊಂದಣಿಗಾಗಿ https://agnipathvayu.cdac.in ಗೆ ಭೇಟಿ ನೀಡಬಹುದು. ಆನ್ಲೈನ್ ಪರೀಕ್ಷೆ 2023ನೇ ಜನವರಿಯಲ್ಲಿ ನಡೆಯಲಿವೆ.
ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್ https://careerindianairforce.cdac.in ನೋಡಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ದೂ.08392-273988ಗೆ ಸಂಪರ್ಕಿಸಬಹುದಾಗಿದೆ.