ನವದೆಹಲಿ: ನವೆಂಬರ್ 10 ರಂದು ಕೆಂಪು ಕೋಟೆ ಸ್ಫೋಟದ ನಾಲ್ವರು ಪ್ರಮುಖ ಸಂಚುಕೋರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ ಗುರುವಾರ ಔಪಚಾರಿಕವಾಗಿ ಬಂಧಿಸಿದ್ದು, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಆರಕ್ಕೆ ತಲುಪಿದೆ.
ಪುಲ್ವಾಮಾದ ಡಾ.ಮುಝಮ್ಮಿಲ್ ಶಕೀಲ್ ಗನೈ, ಅನಂತನಾಗ್ನ ಡಾ.ಅದೀಲ್ ಅಹ್ಮದ್ ರಾಥರ್, ಲಕ್ನೋದ ಡಾ.ಶಾಹೀನ್ ಸಯೀದ್ ಮತ್ತು ಶೋಪಿಯಾನ್ನ ಮುಫ್ತಿ ಇರ್ಫಾನ್ ಅಹ್ಮದ್ ವಾಘೆ ಅವರನ್ನು ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು.
ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಧೀಶರು ಹೊರಡಿಸಿದ ಪ್ರೊಡಕ್ಷನ್ ವಾರಂಟ್ ಮೇರೆಗೆ ಶಂಕಿತರನ್ನು ಶ್ರೀನಗರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಸಿಬಿಐ 15 ದಿನಗಳ ವಿಚಾರಣೆಗೆ ಸೂಚಿಸಿದ ನಂತರ ಅವರನ್ನು 10 ದಿನಗಳ ಎನ್ಐಎ ಕಸ್ಟಡಿಗೆ ಕಳುಹಿಸಲಾಗಿದೆ








